ಸುದ್ದಿಗಳು

ಸಕಲೇಶಪುರ ಟ್ರಿಪ್ ನಲ್ಲಿ ಪ್ರಜ್ವಲ್ ದಂಪತಿ !

ಹೀರೋಗಳು ಸಿನಿಮಾದಲ್ಲಿ ಮಾತ್ರ ಹೀರೋಯಿಸಂ​ ತೋರಿಸ್ತಾರೆ. ರಿಯಲ್​ ಲೈಫ್​ನಲ್ಲಿ ಅಲ್ಲ. ಆನ್ ​ಸ್ಕ್ರೀನ್​ ರೊಮ್ಯಾನ್ಸ್​ ಮಾಡ್ತಾರೆ, ನಿಜ ಜೀವನದಲ್ಲಿ ಅಲ್ಲ. ಹೀರೋಯಿನ್ ​​ಗಳ ಜೊತೆಗೆ ರೊಮ್ಯಾಂಟಿಕ್​ ಆಗಿ ಇರ್ತಾರೆ. ಹೆಂಡ್ತಿ ಜೊತೆ ಅಲ್ಲ ಅನ್ನೋರೆಲ್ಲಾ ಕಣ್​​​ ಬಿಟ್​ ನೋಡಿ. ಪ್ರಜ್ವಲ್​ ದೇವರಾಜ್​ ಅವ್ರ ಹೆಂಡ್ತಿ ರಾಗಿಣಿ ಚಂದ್ರನ್​​​​​ ನೀರಲ್ಲಿ ನೆನೀಬಾರದು ಅಂತ ಎಷ್ಟು ಚೆನ್ನಾಗಿ ಎತ್ಕೊಂಡು ನಿಂತಿದ್ದಾರೆ. ಕನ್ನಡದ ಕ್ಯೂಟೆಸ್ಟ್ ಜೋಡಿಗಳಲ್ಲಿ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​​​​​​​​​​​​​​​​​​​​​​​​ ಹಾಗೂ ರಾಗಿಣಿ ಚಂದ್ರನ್​​ ಜೋಡಿ ಕೂಡ ಒಂದು. ಈ ಜೋಡಿಯ ಸೋಷಿಯಲ್ ಮೀಡಿಯಾ ಪೇಜ್​ ಗಳನ್ನ ಸಾಕಷ್ಟು ಮದುವೆಯಾದ ಯುವಜೋಡಿಗಳು ಫಾಲೋ ಮಾಡೋದು ಇದೇ ಕಾರಣಕ್ಕೆ.

ಇತ್ತೀಚೆಗೆ ಡೈನಾಮಿಕ್​ ಹೀರೋ ದೇವರಾಜ್​ ತಮ್ಮ ಇಡೀ ಕುಟುಂಬದ ಜೊತೆ ಸಕಲೇಶಪುರಕ್ಕೆ ಟ್ರಿಪ್​ ಹೋಗಿ ಬಂದಿದ್ದಾರೆ. ಇದು ದೇವರಾಜ್​ ಕುಟುಂಬಕ್ಕೆ ರಾಗಿಣಿ ಬಂದ ನಂತ್ರ ಹೋಗ್ತಾ ಇರೋ ಮೊದಲ ಫ್ಯಾಮಿಲಿ ಟ್ರಿಪ್​. ಈ ಟ್ರಿಪ್​  ಫೋಟೋಗಳನ್ನ ಈಗ ಶೇರ್​ ಮಾಡಿದ್ದಾರೆ ಮಿಸ್ಸೆಸ್​ ಪ್ರಜ್ವಲ್​ ದೇವರಾಜ್. ಈ ಫೋಟೋ ನೋಡಿದ​ ಮೇಲೆ, ಫೋಟೋದಲ್ಲಿ ಹ್ಯಾಪಿಯಾಗಿ ಪೋಸ್​ ಕೊಟ್ಟಿರೋ ಈ ಜೋಡಿ ನೋಡಿದ​ ಮೇಲೆ, ಯಾರಿಗಾದ್ರು ಅನ್ಸೋದಿಲ್ವೇ.. ದೃಷ್ಟಿ ಆಯ್ತದೆ ನೋಡ್ಬೇಡಿ, ಪೆಸಲ್ಲಾಗೈತೆ ಈ​ ಜೋಡಿ ಅಂತ..!

Tags

Related Articles

Leave a Reply

Your email address will not be published. Required fields are marked *