ಸುದ್ದಿಗಳು

ಲೈಫ್ ಜೊತೆಗೊಂದು ಸೆಲ್ಫಿಗೆ ಸಿನಿಮಾ ರಿಲೀಸ್ ಗೆ ಚುನಾವಣೆ ಅಡ್ಡ

ಲೈಫ್​​​​​​​​​​​​​ ಜೊತೆಗೊಂದು ಸೆಲ್ಫಿ, ಟೈಟಲ್​​ನಿಂದಲೇ ಸಾಕಷ್ಟು ಗಮನ ಸೆಳೆದಿದ್ದ ಸಿನಿಮಾ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದಿನಗಳಲ್ಲಿ ಸೆಲ್ಫಿ ಇಲ್ಲದೆ ಜೀವನವೇ ಇಲ್ಲ ಅನ್ನೋ ಹಾಗಾಗಿದೆ.

ದಿನಕರ್​ ತೂಗುದೀಪ ಆ್ಯಕ್ಷನ್​ ಕಟ್​ ಹೇಳ್ತಾ ಇರೋ ಮಲ್ಟಿ ಸ್ಟಾರ್​ ಸಿನಿಮಾ ಇದು. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್​, ನೆನಪಿರಲಿ ಪ್ರೇಮ್​​​, ಹರಿಪ್ರಿಯ ನಟಿಸುತ್ತಿರೋ ಸಿನಿಮಾ. ಟೈಟಲ್ ನಂತೆ ಈ ಸಿನಿಮಾ ಕೂಡ ಒಂದು ಡಿಫರೆಂಟ್​ ಸಿನಿಮಾ. ಹೆಚ್ಚಾಗಿ ಲವ್​ಸ್ಟೋರಿಗಳೇ ಬರ್ತಾ ಇರೋ ಸಿನಿಮಾಗಳ ನಡುವೆ ಒಂದು ಫ್ರೆಂಡ್​ ಶಿಪ್​ ಕಹಾನಿಯನ್ನ ಹೇಳೋಕೆ ಬರ್ತಾ ಇರೋ ಚಿತ್ರ ಲೈಫ್​ ಜೊತೆಗೊಂದು ಸೆಲ್ಫಿ.

ಈ ಸಿನಿಮಾ ಸದ್ದಿಲ್ಲದೆ ಶೂಟಿಂಗ್​ ಮುಗಿಸಿ, ಬಹುಬೇಗ ರಿಲೀಸ್​ ಹಂತಕ್ಕೂ ಬಂದು ನಿಂತಿತ್ತು, ಆದ್ರೆ ರಿಲೀಸ್​ ಮಾತ್ರ ಆಗಿರ್ಲಿಲ್ಲ. ಶೂಟಿಂಗ್​​​ ಮುಗಿಸಿ,ಆಲ್​ಮೋಸ್ಟ್​​ ಪೋಸ್ಟ್​​ ಪ್ರೊಡಕ್ಷನ್​​​​​​​ ನನ್ನೂ ಮುಗಿಸಿ, ಈಗ ಸಿನಿಮಾ ರಿಲೀಸ್ ಆಗದಿರೋದಕ್ಕೂ ಒಂದು ಕಾರಣವಿದೆ.

ಲೈಫ್​ ಜೊತೆಗೊಂದು ಸೆಲ್ಫಿಗೇ ಹಣ ಹಾಕಿರೋದು ಸಮೃದ್ಧಿ ಮಂಜುನಾಥ್. ​​​ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ. ಸದ್ಯ ಎಲೆಕ್ಷನ್​ ಹತ್ತಿರ ಬಂದ ಕಾರಣ ಮಂಜುನಾಥ್​ ಮುಳಬಾಗಿಲಿನಲ್ಲಿ ಎಲೆಕ್ಷನ್​​ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಿನಿಮಾದ ಪ್ರಮೋಷನ್​ ಅಸಾಧ್ಯ, ರಿಲೀಸ್​ ಕೂಡ ಆಗುವುದು ಕಷ್ಟ.

ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಎಲೆಕ್ಷನ್ ​​ಗೂ ಮೊದಲೇ ಸಿನಿಮಾ ತೆರೆಗೆ ಬರಬೇಕಿತ್ತು, ಆದ್ರೆ ಶೂಟ್​ ನ ನಂತ್ರ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​​ ತುಸು ಹೆಚ್ಚೆ ಟೈಮ್​​ ತೆಗೆದುಕೊಂಡಿದೆ. ಹೀಗಾಗಿ ಸಿನಿಮಾ ರಿಲೀಸ್​ ಡಿಲೇ ಆಗಿದೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆ ನಂತ್ರ, ಸಿನಿಮಾದ ಆಡಿಯೋ ಲಾಂಚ್​ ಆಗಿ ಆನಂತ್ರ ಸಿನಿಮಾ ಪ್ರಮೋಷನ್​​​, ಆ ನಂತ್ರವೇ ರಿಲೀಸ್​ ಆಗಲಿದೆ ಅಂದಿದೆ ಸಿನಿಮಾ ಟೀಮ್​.

Tags

Related Articles