ಸುದ್ದಿಗಳು

ಪ್ರೇಮ್ ವಿರುದ್ದ ಹಿರಿಯ ನಿರ್ದೇಶಕ ಗರಂ !

ಕೆಲವೊಮ್ಮೆ ನಾವು ಆಡುವ ಮಾತುಗಳು ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿದ್ರು ತುಸು ಲೆಕ್ಕಕ್ಕೆ ಬರೋದಿಲ್ಲ. ಇದೀಗ ಪ್ರೇಮ್ ಆಡಿದ ಒಂದು ಮಾತು ಕೂಡ ಇದೇ ರೀತಿ ಆಗಿದೆ.

ದಿ ವಿಲನ್ ಸಿನಿಮಾ ಸಾರಥಿ ಪ್ರೇಮ್ ವಿರುದ್ಧ ಹಿರಿಯ ನಿರ್ದೇಶಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿ ವಿಲನ್ ಚಿತ್ರದ ಹಾಡೊಂದು ವಿವಾದವಾಗಿದ್ದರಿಂದ ನಿರ್ದೇಶಕ ಪ್ರೇಮ್, ಫೇಸ್‍ ಬುಕ್‍ ನಲ್ಲಿ ಲೈವ್ ಬಂದು ಸ್ಪಷ್ಟನೆ ನೀಡುವ ವೇಳೆ ಕೆಲ ನಿರ್ದೇಶಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿ ಮಾಲ್‍ ನಲ್ಲಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೆಕ್ಷಕರಿಗೆ 500 ರೂ. ಟಿಕೆಟ್ ದರವನ್ನು ನಿಗದಿ ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಆ ಹಣವನ್ನು ಹಿರಿಯ ನಿರ್ದೇಶಕರ ಕುಟುಂಬಕ್ಕೆ ಅಲ್ಲೆ ನೀಡಲಾಗುವುದು ಅಂತಾ ತಿಳಿಸಿದ್ದರು.

ಈ ವೇಳೆ ತಮ್ಮ ಮಾತಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ನಿರ್ದೇಶಕರು ಎ.ಟಿ.ರಘು, ಎ.ಆರ್.ಬಾಬು ಸೇರಿದಂತೆ ಹಲವರು ನಿರ್ಗತಿಕರಾಗಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರಿಗೆ ನಿರ್ಗತಿಕರು ಎಂಬ ಪದ ಬಳಸಿದ್ದಕ್ಕೆ ಎ.ಆರ್.ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದನವನದ ಹಿರಿಯ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿರೋದು ನಿಜ. ಆದ್ರೆ ಪ್ರೇಮ್ ನಿರ್ಗತಿಕರು ಎಂಬ ಪದ ಬಳಸಿರೋದು ತಪ್ಪು. ನಿರ್ಗತಿಕರು ಅಂದ್ರೆ ಯಾರು ಇಲ್ಲದವರು ಎಂದರ್ಥವಾಗುತ್ತದೆ ಎಂದು ಬಾಬು ಹೇಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *