ಸುದ್ದಿಗಳು

ಡ್ರೋನ್ ಆಪರೇಟ್ ಮಾಡಿದ ಪುನೀತ್ !

ಪವರ್ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಂದ್ರೆನೇ ಉತ್ಸಾಹದ ಚಿಲುಮೆ. ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರೋ ಈ ಆಕ್ಟರ್‌. ಟೆಕ್ನಿಕಲಿ ಬಹಳ ಚೆನ್ನಾಗಿ ತಿಳಿದುಕೊಂಡಿರುವಂತಹ ನಟ, ಜೊತೆಗೆ ಕ್ಯಾಮೆರಾ ಲವ್ವರ್‌.

ಹೌದು, ನಿಮಗೆಲ್ಲಾ ಗೊತ್ತಿರೋ ಹಾಗೆ, ಯಾವಾಗಲೂ ಹೊಸತರ ಬಗ್ಗೆ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿರೋ ಪುನೀತ್‌ ರಾಜ್‌ ಕುಮಾರ್‌ ಗೆ, ಕ್ಯಾಮೆರಾ ಅಂದ್ರೆ ಸಖತ್‌ ಪ್ರೀತಿ. ಯಾವುದೇ ಹೊಸ ಕ್ಯಾಮೆರಾ ಬರಲಿ ಅದನ್ನ ಮೊದಲು ಪುನೀತ್‌ ರಾಜ್‌ ಕುಮಾರ್‌ ನೋಡ್ತಾರೆ, ಟೆಸ್ಟ್‌ ಮಾಡ್ತಾರೆ.

ಇಷ್ಟ ಆಯ್ತು ಅಂದ್ರೆ ಖರೀದಿಸಿಯೇ ಬಿಡ್ತಾರೆ. ಇಂತಹ ಪುನೀತ್‌ ರಾಜ್‌ ಕುಮಾರ್‌ ಇತ್ತಿಚೆಗಷ್ಟೇ ನಟಸಾರ್ವಭೌಮ ಸೆಟ್‌ ನಲ್ಲಿ ಡ್ರೋನ್‌ ಕ್ಯಾಮೆರಾ ಆಪರೇಟ್‌ ಮಾಡಿದ್ದಾರೆ. ಸಡನ್‌ ಆಗಿ ಡ್ರೋಣ್‌ ಕ್ಯಾಮೆರಾ ಆಪರೇಟ್‌ ಮಾಡಿ, ಸೆಟ್‌ ನಲ್ಲಿದ್ದವರನ್ನ ಅಚ್ಚರಿಗೊಳಿಸಿದ್ದಾರೆ.

ಅಂದ್ಹಾಗೆ, ಅಪ್ಪು ಡ್ರೋಣ್‌ ಅಪರೇಟ್‌ ಮಾಡೋದನ್ನ ಸಹನಟ, ಹಾಸ್ಯ ಕಲಾವಿದ ಚಿಕ್ಕಣ್ಣ ಬೆರಗುಗಣ್ಣಿನಿಂದ ನೋಡ್ತಿದ್ದಾರೆ. ಈ ಫೋಟೋ ಸದ್ಯ ಅನ್‌ ಲೈನ್‌ ನಲ್ಲಿ ಹಲ್‌ ಚೆಲ್‌ ಎಬ್ಬಿಸ್ತಿದ್ದು. ಪವರ್‌ ಸ್ಟಾರ್‌ ಎಕ್ಸ್‌ಟ್ರಾ  ಸ್ಕಿಲ್ಸ್‌ ಕಂಡು ಅಪ್ಪು ಫ್ಯಾನ್ಸ್‌ ಫುಲ್‌ ದಿಲ್‌ ಖುಶ್‌ ಆಗಿದ್ದಾರೆ.

Tags