ಸುದ್ದಿಗಳು

ಮತ್ತೆ ಒಂದಾಗಲಿದ್ದಾರೆ ಟಗರು ತ್ರಿವಳಿಯರು !

ಸದ್ಯ ಟಗರು ಸಿನಿಮಾ ಬಾರಿ ಸದ್ದನ್ನ ಮಾಡಿತ್ತು. ೧೦೦ ದಿನಗಳತ್ತ ದಾಪುಗಾಲು ಹಾಕ್ತಿರೋ ಈ ಸಿನಿಮಾಗೆ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಬೇರೆ ಬೇರೆ ಹೊರದೇಶದಲ್ಲೂ ಈ ಸಿನಿಮಾ ತೆರೆ ಕಂಡು ಟ್ರೆಂಡ್ ಸೃಷ್ಟಿ ಮಾಡಿದೆ. ಇದೀಗ ಈ ಸಿನಿಮಾದ ತ್ರಿವಳಿಗಳು ಮತ್ತೆ ಒಂದಾಗಿ ಮಾಡಲು ಬರುತ್ತಿದ್ದಾರೆ.

ಹೌದು, ನಿರ್ದೇಶಕ ಸೂರಿ, ನಿರ್ಮಾಪಕ ಶ್ರೀಕಾಂತ್ ಮತ್ತು ನಟ ಧನಂಜಯ್ ಅವರ ಕಾಂಬಿನೇಷನ್‌ ನಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಅನ್ನೋ ಗಾಸಿಪ್ ಒಂದು ಇದೀಗ ಗಾಂಧಿ ನಗರದಲ್ಲಿ ಜೋರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಟಗರು ಚಿತ್ರದ ನಂತರವೂ ನಟ ಧನಂಜಯ್ ಜೊತೆಗಿನ ಸಂಬಂಧ ಮತ್ತು ಕೆಲಸವನ್ನು ಮುಂದುವರಿಸುವುದಾಗಿ ನಿರ್ದೇಶಕ ಸೂರಿ ಹೇಳಿದ್ದರು.

ಈ ಮಾತು ಇದೀಗ ಸಿನಿಮಾ ಮಾಡೋದ್ರ ಬಗ್ಗೆ ಮತ್ತಷ್ಟು ನಂಬಿಕೆ ಹೆಚ್ಚಿಸಿದೆ. ಇದೀಗ ತಮ್ಮ ಮಾತನ್ನು ಉಳಿಸಿಕೊಂಡಿರುವ ಸೂರಿ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಮತ್ತೆ ಇಬ್ಬರೂ ಜೊತೆಯಾಗಲಿದ್ದಾರೆ. ಚಿತ್ರದ ಕಥೆ, ಸಂಭಾಷಣೆ ಸಿದ್ಧವಾಗುತ್ತಿದೆ.

ಶಿವರಾಜ್ ಕುಮಾರ್ ನಟನೆಯ ಹಿಟ್ ಚಿತ್ರ ಟಗರುವಿನಲ್ಲಿ ಡಾಲಿ ಪಾತ್ರದಲ್ಲಿ ಮಿಂಚಿದ್ದ ಧನಂಜಯ್ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದರು.

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಟಗರುವಿನ ನಂತರ ಮತ್ತೊಂದು ಯಶಸ್ವಿ ಚಿತ್ರವನ್ನು ನೀಡಲು ಸಿದ್ಧವಾಗಿದೆ ಈ ಜೋಡಿ. ಚಿತ್ರದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಆದ್ರೆ ಅಭಿಮಾನಿಗಳು ಕೂಡ ಈ ಮೂವರ ಚಿತ್ರ ಮತ್ತೆ ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ. ಆದ್ರೆ ಇದ್ಯಾವ ಸಿನಿಮಾ ಅನ್ನೋದು ಮಾತ್ರ ಇನ್ನು ಕುತೂಹಲ.

Tags

Related Articles

Leave a Reply

Your email address will not be published. Required fields are marked *