ಸುದ್ದಿಗಳು

ವೈರಲ್ ಆದ ‘ದಿ ವಿಲನ್’ ಪ್ರಮೋಷನಲ್ ಸಾಂಗ್!

‘ದಿ ವಿಲನ್’ ಸಿನಿಮಾ ಮುಹೂರ್ತ ಕಂಡಾಗಿನಿಂದಲೂ ಒಂದಲ್ಲ ಒಂದು ಸದ್ದು ಮಾಡ್ತಾ ಇದೆ. ಈಗಾಗ್ಲೆ ಸಾಕಷ್ಟು ವಿಚಾರಗಳಿಂದ ಚರ್ಚೆಗೂ ಗ್ರಾಸವಾಗಿದೆ ದಿ ವಿಲನ್ ಸಿನಿಮಾ. ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದು ಇದರ ಒಂದು ಸಾಂಗ್ ವೈರಲ್ ಆಗ್ತಾ ಇದೆ. ಇದೇನಪ್ಪಾ ಸಾಂಗ್ ರಿಲೀಸ್ ಆಯ್ತಾ ಅಂದುಕೊಂಡ್ರಾ ಹಾಗಾದ್ರೆ ಮುಂದೆ ನೋಡಿ.

ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ  ಸದ್ಯ ಶೂಟಿಂಗ್ ನಲ್ಲಿ ಬ್ಯುಸಿ ಇದೆ. ಇತ್ತೀಚೆಗಷ್ಟೆ ೨ ಟೀಸರ್ ಮೂಲಕ ಸಾಕಷ್ಟು ವೈರಲ್ ಆಗಿದ್ದ ಈ ಸಿನಿಮಾ ಇದೀಗ ಮತ್ತೊಮ್ಮೆ ವೈರಲ್ ಆಗ್ತಾ ಇದೆ. ನಿನ್ನೆಯಷ್ಟೆ ಶಿವಣ್ಣನ ಹುಟುಹಬ್ಬ ನೆರವೇರಿದ್ದು, ಬರ್ಥಡೆಗೆ ಅಂತಾ ಸಿನಿಮಾ ತಂಡ ಒಂದು ಪ್ರಮೋಷನ್ ಸಾಂಗ್ ರಿಲೀಸ್ ಮಾಡಿದೆ. ಆ ಸಾಂಗ್ ಕೇಳಿದ್ರೆ ಎಂಥವರಿಗೂ ಕಿಕ್ ಏರೋದು ಗ್ಯಾರಂಟಿ. ಯಾಕಂದ್ರೆ ಆ ಸಾಂಗ್ ನ ಪ್ರತಿಯೊಂದು ಪದವು ಕೂಡ ಚೆಂದವಾಗಿ ಜೋಡಿಸಲಾಗಿದೆ.


ಇನ್ನು ಈ ಹಾಡಿನ ಮೊದಲ ಸಾಲು ಗುಮ್ತಲಕಡಿ ಗುಲ ಗುಲ ಎಂದು ಆರಂಭವಾಗುತ್ತೆ. ಈ ಹಾಡು ಶಿವಣ್ಣ ಮತ್ತು ಸುದೀಪ್ ಬಗ್ಗೆ ಕುರಿತಾಗಿದೆ. ವಿಜಯ್ ಈಶ್ವರ್, ಚಂದು ಪಾರ್ಥಧ್ವಜ ಮತ್ತು ಎಚ್.ವಿ.ಆರ್ ಸಾಹಿತ್ಯ ಬರೆದಿದ್ದು, ಜೋಗಿ ಸುನೀತಾ, ಮಾದ್ವೇಶ ಭಾರಧ್ವಜ ಹಾಡಿದ್ದಾರೆ. ಈ ಹಾಡನ್ನ ಖ್ಯಾತ ಆಡಿಯೋ ಕಂಪನಿ ಆನಂದ್ ಆಡಿಯೋ ಬಿಡುಗಡೆ ಮಾಡಿದೆ. ಸದ್ಯ ಈ ಸಾಂಗ್ ಸಾಕಷ್ಟು ಸದ್ದು ಮಾಡ್ತಾ ಇದೆ. ಅಷ್ಟೆ ಅಲ್ಲ ನೋಡುಗರ ಸಂಖ್ಯೆ ಕೂಡ ಒಂದೇ ದಿನಕ್ಕೆ ಒಂದು ಲಕ್ಷ ದಾಟಿದೆ.

ಸದ್ಯ ಈ ಸಿನಿಮಾ ಬಿಡುಗಡೆಗೆ ಈಗಾಗಲೆ ಸಾಕಷ್ಟು ಅಭಿಮಾನಿಗಳು ಕಾಯ್ತಾ ಇದ್ದಾರೆ. ಇನ್ನು ಸದ್ಯ ಈ ಸಿನಿಮಾದ ಶೂಟಿಂಗ್ ಕೂಡ ಬರದಿಂದ ಸಾಗಿದ್ದು, ಆದಷ್ಟು ಬೇಗ ಸಿನಿಮಾ ರಿಲೀಸ್ ಆಗಲಿದೆ.

Tags