ಸುದ್ದಿಗಳು

ಸಿನಿಮಾ ಪ್ರಚಾರಕ್ಕಾಗಿ ಕಿತ್ತಾಡಿದ ರಶ್ಮಿಕಾ ಮತ್ತು ವಿಜಯ್ ದೇವರ ಕೊಂಡ !

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡಿದ ರಶ್ಮಿಕ ಒಂದೇ ಸಿನಿಮಾದಲ್ಲಿ ಮನೆ ಮಾತಾದ್ರು. ಫಸ್ಟ್ ಆಫ್ ನಲ್ಲಿ ಮಾತ್ರ ಬಂದರೂ ಅವಕಾಶಗಳು ಮಾತ್ರ ಇವರನ್ನ ಹುಡುಕಿಕೊಂಡು ಬಂದ್ವು. ಇದೀಗ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಚಾರ ಏನಪ್ಪ ಅಂದ್ರೆ ನಟ ದೇವರಕೊಂಡ ಜೊತೆ ರಶ್ಮಿಕಾ ಜಗಳವಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಾ ಇದೆ.

ಹೌದು, ಸದ್ಯ ಗೀತಾ ಗೋವಿದಂ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಈ ಬೆನಲ್ಲೇ ದೇವರ ಕೊಂಡ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿದ್ದಾರೆ. ಸೌತ್ ಇಂಡಿಯಾ ಫಿಲ್ಮ್ ಫೇರ್ ಅವಾರ್ಡ್ ವಿಜಯ್ ಗೆ ಬಂದಿದೆ. ಈ ವಿಚಾರಕ್ಕೆ ನಿಮ್ಗೆ ಬೆಸ್ಟ್ ಆಕ್ಟರ್ ಅವಾರ್ಡ್ ಬಂದಿದೆಯಂತೆ ಹೌದಾ ಎಂದು ವಿಶ್ ಮಾಡಿದ್ದಾರೆ. ಇದಕ್ಕೆ ಮುಂದುವರೆದು ರಿಪ್ಲೇ ಮಾಡಿದ ವಿಜಯ್, ಗೀತಾ ಮೇಡಂ, ನಿಮ್ಮ ಜೊತೆ ಸಮಯ ಕಳೆದಿದ್ದೇ ನನಗೆ ದೊಡ್ಡ ಅವಾರ್ಡ್, ಇದೆಲ್ಲ ಬರುತ್ತೆ, ಹೋಗುತ್ತೆ ಬಿಡಿ” ಎಂದು ಪ್ರತಿಕ್ರಿಯಿಸಿದ್ದಾರೆ.

ದೇವರಕೊಂಡಗೆ ಕಾಲೆಳೆದ ರಶ್ಮಿಕಾ ”ನೋಡು ಗೋವಿಂದ, ಈ ಓವರ್ ಆಕ್ಟಿಂಗ್ ನ್ನ ಕಮ್ಮಿ ಮಾಡಿಕೊ ಅಂದಿದ್ದು. ಈ ಅವಾರ್ಡ್ ಪ್ರಭಾಸ್ ಗೋ ಅಥವಾ ತಾರಕ್ ಅವರಿಗೆ ಬಂದಿದ್ದರೇ ಈ ಜಗಳ ಇರ್ತಿರಲಿಲ್ಲ” ಎಂದು ಮತ್ತೆ ದೇವರಕೊಂಡ ಅವರಿಗೆ ತಿರುಗೇಟು ನೀಡಿದರು. ಮತ್ತೆ ಮತ್ತೆ ಟಾರ್ಗೆಟ್ ಮಾಡಿದ ನಟ ”ಈ ಅವಾರ್ಡ್ ಏನಿದೆ ಮೇಡಂ, ನಿಮ್ಮಂತವರು ನನ್ನ ಪ್ರೀತಿಸಿದ್ದು ಸಾಕು. ಗೀತಾ ಮೇಡಂ” ಎಂದು ವಿಜಯ ದೇವರಕೊಂಡ ರಶ್ಮಿಕಾಗೆ ಮತ್ತೆ ಟ್ವೀಟ್ ಮಾಡಿದರು. ಇದಕ್ಕೆ ಮತ್ತೆ ಟ್ವೀಟ್ ಮಾಡಿದ ರಶ್ಮಿಕಾ ”ನಮ್ಮಂತವರಾ.? ‘ಅವರು’ ಯಾಕೆ.? ಆ ಬಹುವಚನ ಯಾಕೆ.? ನಿನ್ನ ಬಗ್ಗೆ ಗೊತ್ತು ಬಿಡು, ಒಬ್ಬರು ಸಾಕಾಗಲ್ಲ, ಯಾರನ್ನ ಬಿಡಲ್ಲ ಅಲ್ವಾ.!” ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ನಟ ”ಮೇಡಂ ನನ್ನ ಉದ್ದೇಶ ಇದಲ್ಲ, 23ನೇ ತಾರೀಖು ನನ್ನನ್ನು ಭೇಟಿ ಮಾಡಿ, ವಿಷ್ಯ ಹೇಳುತ್ತೇನೆ” ಎಂದಿದ್ದರು.

ಇದಕ್ಕೂ ಮುಂದುವರೆದಿದೆ ಇಬ್ಬರ ಜಗಳ. ಚಿತ್ರದ ಪೋಸ್ಟ್ ಸೇರಿದಂತೆ ಹಲವಾರು ವಿಚಾರಗಳು ಚರ್ಚೆಯಾಗಿವೆ. ಆದ್ರೆ ಇದನ್ನೆಲ್ಲಾ ನೋಡ್ತಾ ಇದ್ರೆ ಇದು ಜಗಳ, ಯಾವುದೇ ಮುನಿಸಲ್ಲ ಎಂಬುದು ಗೊತ್ತಾಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಮಾಡ್ತಾ ಇದ್ದಾರಾ ಅನ್ನೋದು ಅಭಿಮಾನಿಗಳ ಮಾತು.

Tags

Related Articles

Leave a Reply

Your email address will not be published. Required fields are marked *