ಸುದ್ದಿಗಳು

ಜೂನ್ ಒಂದಕ್ಕೆ ವೆನಿಲಾ !

ಸದ್ಯ ಚುನಾವಣೆಯ ಕಾವು ಕೊಂಚ ಕಡಿಮೆಯಾಗಿದೆ. ಚುನಾವಣೆ ಮುಗಿದ ಮೇಲೆ ಸಿನಿಮಾ ಬಿಡುಗಡೆಗಾಗಿ ನಿರ್ಮಾಪಕರು ಕಾಯ್ತಾ ಇದ್ರು. ಇದೀಗ ಆ ಕಾಲ ಕೂಡಿ ಬಂದಿದೆ. ತೆರೆಗೆ ಬರಲು ರೆಡಿಯಾದ ಸಿನಿಮಾಗಳಲ್ಲಿ ವೆನಿಲಾ ಕೂಡ ಒಂದು. ಚುನಾವಣೆ ನಂತರ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಆ ರೀತಿಯಲ್ಲಿಯೇ ಇದೀಗ ಜೂನ್ ಒಂದಕ್ಕೆ ತೆರೆಗೆ ಬರಲು ರೆಡಿಯಾಗಿದೆ.

ಹೌದು, ಬ್ಯೂಟಿಫುಲ್ ಮನಸುಗಳು ಚಿತ್ರದ ನಿರ್ದೇಶಕ ಜಯತೀರ್ಥರ ಮತ್ತೊಂದು ಸಿನಿಮಾವೇ ವೆನಿಲಾ. ಕನ್ನಡದ ಪ್ರತಿಭಾವಂತ ನಿರ್ದೇಶಕರ ಪೈಕಿ ಜಯತೀರ್ಥ ಕೂಡ ಒಬ್ಬರು. ತಮ್ಮ ಬ್ಯೂಟಿಫುಲ್ ಮನಸುಗಳು ಚಿತ್ರದ ನಂತರ ವೆನಿಲಾ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜೂನ್ ೧ಕ್ಕೆ ವೆನಿಲಾ ಸಿನಿಮಾ ಬಿಡುಗಡೆಯಾಗಲಿದೆ. ವೆನಿಲಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ.

ಇನ್ನು, ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ ’ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. ಇನ್ನು ತೆರೆ ಮೇಲೆ ಈ ಜೋಡಿ ತುಂಬ ಚೆನ್ನಾಗಿ ಕಾಣಿಸುತ್ತದೆ. ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ ’ವೆನಿಲಾ’ ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇನ್ನು ಈ ಸಿನಿಮಾದಲ್ಲಿ ರವಿಶಂಕರ್ ಗೌಡ, ಪಾವನ, ಬಿ.ಸುರೇಶ್, ರೆಹಮಾನ್, ಗಿರಿ, ನಂದ ಮುಂತಾದವರು ಈ ಚಿತ್ರದಲ್ಲಿ ತಾರಾಬಳಗವಿದೆ. ಚಿತ್ರದ ಹಾಡೊಂದರ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಮದನ್ ಬೆಳ್ಳಿಸಾಲು ಅವರ ಸಾಹಿತ್ಯ ಒಂದು ಹಾಡಿನಲ್ಲಿದೆ. ನಮ್ಮೂರಲ್ಲಿ ಚಳಿಗಾಲದಲ್ಲಿ..’ ಹಾಡಿನ ದೊಡ್ಡ ಯಶಸ್ಸಿನ ನಂತರ ಮತ್ತೆ ಭರತ್ ಮ್ಯೂಸಿಕ್ ಗೆ ಮದನ್ ಪದ ರಚನೆ ಮಾಡಿದ್ದಾರೆ.

ಮತ್ತೊಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಸಿನಿಮಾದ ಎಲ್ಲ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿಯೂ ಆವರಿಸು ಬಾ ಮೆಲ್ಲನೆ.. ಹಾಡು ಎಲ್ಲರ ಫೇವರೇಟ್ ಆಗಿದೆ. ಅಂದಹಾಗೆ, ’ವೆನಿಲಾ’ ಸಿನಿಮಾ ಜೂನ್ ೧ ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈಗಾಗ್ಲೆ ಸಾಕಷ್ಟು ಸುದ್ದಿಯಲ್ಲಿದ್ದು ಚಿತ್ರ ಬಿಡುಗಡೆಯಾದ ನಂತರ ಯಾವ ರೀತಿ ರೆಸ್ಪಾನ್ಸ್ ಇರುತ್ತೆ  ಕಾದು ನೋಡಬೇಕು.

Tags

Related Articles

Leave a Reply

Your email address will not be published. Required fields are marked *