ಸುದ್ದಿಗಳು

ಡಬ್ಬಿಂಗ್ ಶುರು ಮಾಡಿದ ಕೆಜಿಎಫ್ !

ಯಶ್ ಒಂದಲ್ಲಾ ಒಂದು ವಿಷಯದಲ್ಲಿ ಸ್ಯಾಂಡಲ್‍ ವುಡ್‍ ನಲ್ಲಿ ಸದ್ದು ಮಾಡ್ತಾರೆ ಆಗೆ ಆವರ ಸಿನಿಮಾಗಳೂ ಕೂಡ ಅಷ್ಟೇ ನಿರೀಕ್ಷೆ ಹುಟ್ಟಿಸುತ್ತವೆ ಮತ್ತು ಸಖತ್ ಸದ್ದು ಮಾಡ್ತಾವೆ. ಆಗೆ ಯಶ್ ಇತ್ತೀಚಿನ ಸಿನಿಮಾ ಕೆಜಿಎಫ್ ಕೂಡ ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ ಜೊತೆಗೆ ಕುತೂಹಲ ಕೂಡ ಹೆಚ್ಚೆ ಇದೇ.

ಭಾರಿ ಬಜೆಟ್‍ ನಲ್ಲಿ ರೆಡಿಯಾಗುತ್ತಿರುವ ಯಶ್ ಸಿನಿಮಾ ಕೆಜಿಎಫ್ ಇದೀಗ ಡಬ್ಬಿಂಗ್ ಕೆಲಸ ಶುರು ಮಾಡಿದೇಯಂತೆ. ಸದ್ಯ ಸ್ಯಾಂಡಲ್‍ ವುಡ್‍ ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಟ್ರೇಲರ್ ಬಿಡುಗಡೆ ಯಾವಾಗ, ಸಿನಿಮಾ ಬಿಡುಗಡೆ ಯಾವಾಗ ಎಂಬುದು ಎಲ್ಲರ ಪ್ರಶ್ನೆ ಸದ್ಯ ಈ ಪಶ್ನೆಗೆ ಉತ್ತರ ರೆಡಿಯಾಗಿದೆ.

ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರತಂಡ ಡಬ್ಬಿಂಗ್ ನಲ್ಲಿ ಬಿಸಿಯಾಗಿದೆಯಂತೆ. ಜೊತೆಗೆ ಈ ತಿಂಗಳಲ್ಲಿ ನಟ ಅನಂತ್‍ ನಾಗ್ ಅವರ ಭಾಗದ ಚಿತ್ರೀಕರಣ ಕೂಡ ಮುಗಿಯಲಿದ್ದು, ಪ್ರೋಡಕ್ಷನ್ ಮತ್ತು ಎಡಿಟಿಂಗ್ ಕೆಲಸ ಆರಂಭವಾಗಲಿದೆ.

ಅಗಸ್ಟ್ ಗೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಜೊತೆಗೆ ಈ ಸಿನಿಮಾ ಬಿಡುಗಡೆ ನಂತರ ಕೆಜಿಎಫ್ 2 ಸಿನಿಮಾ ಶೂಟಿಂಗ್ ಆರಂಭಿಸಲಾಗುವುದು. ಈ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *