ಸುದ್ದಿಗಳು

ಚಂದನವನದ ಸೆಕೆಂಡ್ ಹಾಫ್ ನಲ್ಲಿ ಕಮಾಲ್ ಮಾಡಲಿರುವ ಸಿನಿಮಾಗಳು

2019 ಆರಂಭವಾಗಿ ಅರ್ಧ ವರ್ಷ ಕಳೆದಿದೆ. ಈ 6 ತಿಂಗಳಲ್ಲಿ ಹೊಸಬರ ಕಾರುಬಾರು ಜೋರಾಗಿತ್ತು. ಸ್ಟಾರ್ ನಟರ ಮತ್ತು ಅದ್ದೂರಿ ವೆಚ್ಚದ ಸಿನಿಮಾಗಳಾದ ‘ಸೀತಾರಾಮ ಕಲ್ಯಾಣ’, ‘ನಟ ಸಾರ್ವಭೌಮ’, ‘ಕವಚ’, ‘ರುಸ್ತುಂ’, ‘99’, ‘ಯಜಮಾನ’, ‘ಅಮರ್’, ‘ಬೆಲ್ ಬಾಟಂ’, ‘ಕವಲುದಾರಿ’, ‘ಪಡ್ಡೆಹುಲಿ’, ‘ಅನುಕ್ತ’ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆದವು. ಆದರೆ, ಅವುಗಳಲ್ಲಿ ಕೆಲವು ಮಾತ್ರ ಹಿಟ್ ಸಿನಿಮಾಗಳು ಎನಿಸಿಕೊಂಡವು.

ಸದ್ಯ ಈ 6 ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ಅಷ್ಟಾಗಿ ತೆರೆಗೆ ಬಂದಿರಲಿಲ್ಲ. ಈಗ ಹೆಸರಾಂತ ನಿರ್ದೇಶಕರು, ಸ್ಟಾರ್ ನಟರು ಮತ್ತು ಹೊಸ ತಂಡದ ಅನೇಕ ಚಿತ್ರಗಳು ಈ ವರ್ಷದ ಸೆಕೆಂಡ್ ಹಾಫ್ ನಲ್ಲಿ ರಿಲೀಸ್ ಗಾಗಿ ಸಿದ್ಧವಾಗುತ್ತಿವೆ. ಅಲ್ಲದೇ ಈ ವರ್ಷ ಸುಮಾರು 250 ಕ್ಕೂ ಹೆಚ್ಚಿನ ಸಿನಿಮಾಗಳು ರಿಲೀಸ್ ಆಗುವ ಅಂದಾಜಿದೆ.

ಸೆಕೆಂಡ್ ಹಾಫ್ ನಲ್ಲಿ ಈ ಬಾರಿ ಸ್ಟಾರ್ ನಟರ ಬಹುತೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಸುದೀಪ್ ನಟನೆಯ ‘ಪೈಲ್ವಾನ್’, ದರ್ಶನ್ ನಟನೆಯ ‘ಕುರುಕ್ಷೇತ್ರ’, ಶ್ರೀಮುರುಳಿ ನಟನೆಯ ‘ಭರಾಟೆ’, ಗಣೇಶ್ ನಟನೆಯ ‘ಗೀತಾ’ ಮತ್ತು ‘ಗಿಮಿಕ್’, ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’, ಸತೀಶ್ ನೀನಾಸಂ ನಟನೆಯ ‘ಬ್ರಹ್ಮಚಾರಿ’, ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’, ಶಿವಣ್ಣ ನಟನೆಯ ‘ದ್ರೋಣ’, ದುನಿಯಾ ವಿಜಯ್ ನಟನೆಯ ‘ಸಲಗ’, ಶರಣ್ ಅವರ ‘ಅವತಾರ ಪುರುಷ’, ಕೋಮಲ್ ನಟನೆಯ ‘ಕೆಂಪೇಗೌಡ 2’, ಜಗ್ಗೇಶ್ ಅವರ ‘ತೋತಾಪುರಿ’, ಧ್ರುವ ಸರ್ಜಾ ನಟನೆಯ ‘ಪೊಗರು’.. ಹೀಗೆ ಅನೇಕ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗಲಿವೆ. ಈ ಮೂಲಕ ಚಿತ್ರರಂಗಕ್ಕೊಂದು ರಂಗು ತರಲಿವೆ.

ಇವುಗಳೊಂದಿಗೆ ‘ಮಾಯಾಬಜಾರ್’, ‘ನನ್ನ ಪ್ರಕಾರ’, ‘ಮನೆ ಮಾರಾಟಕ್ಕಿದೆ’, ‘ಕಾಣದಂತೆ ಮಾಯವಾದನು’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’, ‘ಭೀಮಸೇನ ನಳಮಹಾರಾಜ’, ‘ಬಿಚ್ಚುಗತ್ತಿ,’ ‘ಅಂದವಾದ’, ‘ಕಲ್ಪನಾ ವಿಲಾಸಿ’ , ‘ಲಾ’, ‘ಒನ್ ಲವ್ 2 ಸ್ಟೋರಿ’, ‘ಒಡೆಯ’, ‘ಬುದ್ದಿವಂತ-2’, ‘ಇನ್ಸ್ ಪೆಕ್ಟರ್ ವಿಕ್ರಮ್’, ‘ಜಂಟಲ್ ಮನ್’, ‘ಮಹಿರ’, ‘ಜೆರ್ಕ್’, ‘ರಾಮನ ಸವಾರಿ’, ‘ದಂಡುಪಾಳ್ಯ-4’ ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳು ಕುತೂಹಲ ಮೂಡಿಸಿವೆ.

ಬಹುತಾರಾಬಳಗದ ‘ಯುವರತ್ನ’: ನನ್ನ ಕನಸು ನನಸಾಯ್ತು ಎಂದ ಅರು ಗೌಡ

#sandlewood #expatation #movies #list #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags