ಸುದ್ದಿಗಳು

ಕಿರುಚಿತ್ರ ಜಗತ್ತಿಗೆ ಕಾಲಿಸಿರಿದ ಸಂಗೀತಾ ಭಟ್

ಕೆಲವು ಸಿನಿಮಾ ನಟಿಯರು ಸಿನಿಮಾ ಜೊತೆಗೆ ಕಿರುಚಿತ್ರ ಜಗತ್ತಿಗೂ ಕಾಲಿಡುತ್ತಿದ್ದಾರೆ. ಈಗಾಗಲೇ ಶೃತಿ ಹರಿಹರನ್, ರಚಿತಾ ರಾಮ್, ಹಿತಾ ಚಂದ್ರಶೇಖರ್, ಸಿಂಧು ಲೋಕನಾಥ್ ಸೇರಿದಂತೆ ಇತರರು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬೆಂಗಳೂರು, ಅ. 06: ಸಿನಿಮಾ ಕಲಾವಿದರು ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವಾಗಲೇ ಕಿರುಚಿತ್ರಗಳಲ್ಲಿ ತೊಡಗಿಕೊಳ್ಳುವುದು ಈಗಿಗ ಜಾಸ್ತಿಯಾಗುತ್ತಿದೆ. ಹಿರಿಯ ನಟ ಶ್ರೀನಾಥ್ ಅವರು ‘ನಾರಾಯಣ ಸಾಮಿ’ ಕಿರುಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದರೊಂದಿಗೆ ಕೆಲವು ಸಿನಿಮಾ ನಟಿಯರು ಸಹ ಕಿರುಚಿತ್ರ ಜಗತ್ತಿಗೂ ಕಾಲಿಡುತ್ತಿದ್ದಾರೆ. ಈಗಾಗಲೇ ಶೃತಿ ಹರಿಹರನ್, ರಚಿತಾ ರಾಮ್, ಹಿತಾ ಚಂದ್ರಶೇಖರ್, ಸಿಂಧು ಲೋಕನಾಥ್ ಸೇರಿದಂತೆ ಇತರರು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಂಥವರ ಸಾಲಿಗೆ ಹೊಸ ಸೇರ್ಪಡೆ ಸಂಗೀತಾ ಭಟ್ .

‘ಎರಡನೇ ಸಲ’ದ ನಾಯಕಿ

ನಟಿ ಸಂಗೀತಾ ಭಟ್ ಅವರ ನಟನೆಯ ‘ಎರಡನೇ ಸಲ’ ಚಿತ್ರ ಎಲ್ಲರ ಗಮನ ಸೆಳೆಯಿತು. ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಕಾಲಿರಿಸಿದ ಅವರು ಇದೀಗ ಚಂದನವನ ಬಹು ಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ಅವರು ‘ಅಳಿದುಳಿದವರು’, ‘ಅನುಕ್ತ’ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವುಗಳ ನಡುವೆಯೇ ‘ಕಾನ್ವರ್ಸೆಷನ್’ ಎಂಬ ಕಿರುಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಅದಕ್ಕೆ ನಿರ್ಮಾಣವನ್ನು ಮಾಡಿ ನಿರ್ಮಾಪಕಿಯೂ ಆಗಿದ್ದಾರೆ.

ಆಧುನಿಕ ಸಮಾಜದ ಹುಡುಗಿ

‘ಕಾನ್ವರ್ಸೆಷನ್’ ಕಿರುಚಿತ್ರದಲ್ಲಿ ಸಂಗೀತಾ ಅವರು ಆಧುನಿಕ ಸಮಾಜದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇದೊಂದು ತಂದೆ-ಮಗಳ ಬಾಂಧವ್ಯದ ಕಥೆಯಾಗಿದೆಯಂತೆ. ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಜನರು ತಮ್ಮವರನ್ನೇ ಮರೆತು, ಮುಖಾಮುಖಿ ಕುಳಿತು ಮಾತನಾಡುವ ರೂಢಿಯೇ ತಪ್ಪಿಹೋಗಿದೆ. ಅದೇ ವಿಷಯವನ್ನು ಕೇಂದ್ರೀಕರಿಸಿ ‘ಕಾನ್ವರ್ಸೆಷನ್’ ತಯಾರಾಗುತ್ತಿದೆ. ಇದರಿಂದ ಲಾಭ ಬರದಿದ್ದರೂ ಉತ್ತಮ ಕಥೆಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದಾರೆ.

ಇತರ ನಾಯಕಿಯರ ಕಿರುಚಿತ್ರಗಳು

ಸಿಂಧೂ ಲೋಕನಾಥ್ ‘ಐ ಆ್ಯಮ್ ಥರ್ಟಿ’, ಶೃತಿ ಹರಿಹರನ್ ‘ದಿ ಲಾಸ್ಟ್ ಕನ್ನಡಿಗ’, ರಚಿತಾ ರಾಮ್ ‘ರಿಷಬ್ ಪ್ರಿಯ’, ಈ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಐಶಾನಿ ಶೆಟ್ಟಿ ‘ಕಾಜಿ’ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು ವಿಶೇಷವಾಗಿತ್ತು.

 

@ sunil Javali

Tags

Related Articles