ಸುದ್ದಿಗಳು

ಚಿತ್ರರಂಗ ತೊರೆದಿದ್ದ ಸಂಗೀತಾ ಭಟ್ ‘ಆದ್ಯ’ ಚಿತ್ರವನ್ನು ಮುಗಿಸಿ ಕೊಡುವರೆ…???

#ಮಿಟೂ ಅಭಿಯಾನದಿಂದ ಸದ್ದು ಮಾಡಿದ್ದ ಸಂಗೀತಾ ಭಟ್ ಹಾಗೂ ಶೃತಿ ಹರಿಹರನ್

ಬೆಂಗಳೂರು.ಜ.22:

ಇಡೀ ದೇಶದ ತುಂಬಾ ಬಹಳಷ್ಟು ಸದ್ದು ಮಾಡಿದ್ದ #ಮಿಟೂ ಅಭಿಯಾನ ಕನ್ನಡ ಚಿತ್ರರಂಗದಲ್ಲೂ ಸಹ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ನಟಿಯರಾದ ಸಂಗೀತ ಭಟ್, ಶ್ರುತಿ ಹರಿಹರನ್ ಸೇರಿದಂತೆ ಕೆಲವರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು.

ಚಿತ್ರರಂಗ ತೊರೆದ ಸಂಗೀತಾ ಭಟ್

“ಕೆಲವರಿಂದ ತಮಗೆ ಲೈಂಗಿಕ ಕಿರುಕುಳ ಅನುಭವವಾಗಿದೆ. ಹೀಗಾಗಿ ಚಿತ್ರರಂಗ ಬಿಡುತ್ತಿದ್ದೇನೆ” ಎಂದು ಸಂಗೀತ ಭಟ್ ಕನ್ನಡ ಚಿತ್ರರಂಗದಿಂದ ದೂರ ಸರಿದಿದ್ದರು. ನಂತರ ಅವರು ನಟಿಸಿದ್ದ ‘ಕಿಸ್ಮತ್’ ಸಿನಿಮಾ ರಿಲೀಸ್ ಆಗಿತ್ತು. ಸದ್ಯ ಅವರು ನಟಿಸಿರುವ ‘ಅನುಕ್ತ’ ಹಾಗೂ ‘ಕಟಪ ನಾಟಕ ಪಾತ್ರಧಾರಿ’ ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. ಇದೀಗ ‘ಆದ್ಯ’ ಚಿತ್ರಕ್ಕೆ ಅವರು ಮರಳಿ ಬಣ್ಣ ಹಚ್ಚುತ್ತಾರಾ ಎಂಬುದೇ ಕುತೂಹಲ.

‘ಆದ್ಯ’ ಚಿತ್ರದ ಬಗ್ಗೆ

ವರ್ಷದ ಹಿಂದೆಯೇ ‘ಆದ್ಯ’ ಸಿನಿಮಾ ಶುರುವಾಗಿತ್ತು, ಚಿತ್ರದಲ್ಲಿ ಸಂಗೀತಾಭಟ್ ರೊಂದಿಗೆ ಶೃತಿ ಹರಿಹರನ್ ಕೂಡಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಂತರ ಕೆಲವು ಭಾಗಗಳ ಚಿತ್ರೀಕರಣ ಕೂಡ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಚಿತ್ರ ನಿಂತು ಹೋಗಿತ್ತು.

ಈಗ ಮತ್ತೆ ‘ಆದ್ಯ’ ಸಿನಿಮಾ ಶುರುವಾಗುತ್ತಿದ್ದು, ನಾಯಕ ನಟ ಚಿರಂಜೀವಿ ಸರ್ಜಾ ಕೂಡ ಮಾರ್ಚ್ ನಲ್ಲಿ ಈ ಚಿತ್ರಕ್ಕಾಗಿ ಕಾಲ್ ಶೀಟ್ ನೀಡಿದ್ದಾರೆ. ಇನ್ನೂ ನಾಯಕಿ ಪಾತ್ರಧಾರಿ ಶ್ರುತಿ ಹರಿಹರನ್ ಕೂಡ ಡಬ್ಬಿಂಗ್ ಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ, ಸದ್ಯ ಚಿತ್ರರಂಗ ತೊರೆದ ಸಂಗೀತಾ ಭಟ್ ಮತ್ತೆ ಸಿನಿಮಾರಂಗಕ್ಕೆ ಬರುವರೇ.. ಚಿತ್ರವನ್ನು ಮುಗಿಸಿ ಕೊಡುವರೇ ಎಂಬುದನ್ನು ಕಾದು ನೋಡಬೇಕಿದೆ.

#sangeethabhat, #balkaninews #filmnews, #kannadasuddigalu #chiranjeevisarja, #aadyakannadafilm

Tags