ಸುದ್ದಿಗಳು

ಕಪಟ ನಾಟಕವಾಡಲು ಸಂಗೀತಾ ಭಟ್ ಹಾಗೂ ಬಾಲು ನಾಗೇಂದ್ರ ರೆಡಿ.

“ಪ್ರೀತಿ ಗೀತಿ ಇತ್ಯಾದಿ” ಚಿತ್ರದ ಮೂಲಕ ಚಂದನವನಕ್ಕೆ ಕಾಲಿರಿಸಿದ ಕನ್ನಡತಿ ಸಂಗೀತಾ ಭಟ್ ಅಭಿನಯಿಸಿದ ಮೊದಲ ಚಿತ್ರದಲ್ಲಿ ನಟನೆಗೆ ಶಹಭಾಷಗಿರಿ ಪಡೆದರು. ನಂತರ ಎರಡನೇ ಸಲ, ದಯವಿಟ್ಟು ಗಮನಿಸಿ, ಅಳಿದು ಉಳಿದವರು, ಅನುಕ್ತ ಚಿತ್ರಗಳಲ್ಲೂ ಅಭಿನಯಿಸಿದರು. ಹೀಗೆ ಪ್ರತಿಯೊಂದು ಚಿತ್ರದಲ್ಲೂ ಭಿನ್ನ ಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಾ ಬಂದಿರುವ ಈ ನಟಿ ಇದೀಗ ಬಾಲು ನಾಗೇಂದ್ರ ಅವರೊಂದಿಗೆ ಅಭಿನಯಿಸುತ್ತಿದ್ದಾರೆ. ಹಾಗೂ ಈ ಚಿತ್ರ ಈಗಾಗಲೇ ಶುರುವಾಗಿದೆ.

ಐಟಿ ಕ್ಷೇತ್ರದಲ್ಲಿರುವ ವೇಣುಗೋಪಾಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಬಡ ಮಧ್ಯಮ ಹುಡುಗಿಯ ಪಾತ್ರ ಸಂಗೀತಾದ್ದು. ಹಾಗೂ ಬಾಲು ನಾಗೇಂದ್ರ ಅವರು ಆಟೋ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ನಡುವಿನ ಲವ್ ಸ್ಟೋರಿ ಜೊತೆಗೆ ಮರ್ಡರ್ ಮಿಸ್ಟರಿಯನ್ನೂ ಹೇಳಲಿದ್ದಾರೆ ನಿರ್ದೇಶಕರು. ಆದರೆ ಈ ಚಿತ್ರಕ್ಕೆ ಟೈಟಲ್ ಇನ್ನು ಫಕ್ಕಾ ಆಗಿರಲಿಲ್ಲ.

ಇಡೀ ಚಿತ್ರತಂಡ ಒಟ್ಟಿಗೆ ಚರ್ಚಿಸಿ ಇದೀಗ ಚಿತ್ರಕ್ಕೆ ’ಕಪಟ ನಾಟಕ ಸೂತ್ರಧಾರಿ’ ಎಂದು ಹೆಸರಿಡಲು ತೀರ್ಮಾನಿಸಿದೆಯಂತೆ. ಕೆ.ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಥಮ ಚಿತ್ರ ಇದಾಗಿದ್ದು ಮಹಿಳಾ ಕೇಂದ್ರಿತವಾಗಿರುವ ಈ ಚಿತ್ರವು ಬೆಂಗಳೂರಿನಲ್ಲಿ ನಡೆಯುತ್ತದೆ. ಹಾಗಾಗಿ ಪ್ರತಿ ದೃಶ್ಯವನ್ನೂ ರಾಜಧಾನಿಯ ಪರಿಸರದಲ್ಲೇ ಸೆರೆಹಿಡಿಯಲಾಗಿದೆಯಂತೆ.

ಬಾಲು ನಾಗೇಂದ್ರ ಅವರು ಮೂಲತಃ ರಂಗಭೂಮಿಯಿಂದ ಬಂದಿರುವ ಪ್ರತಿಭಾವಂತ ನಟ. ಈಗಾಗಲೇ ಹುಲಿರಾಯ ಚಿತ್ರದಲ್ಲಿ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು

Tags