ಸುದ್ದಿಗಳು

ಸ್ವರ್ಣಖಡ್ಗಂ ಗೆ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದೇನೆ : ಸಂಜನಾ

ಗಂಡಹೆಂಡತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾದಕ ತಾರೆ ಸಂಜನಾ ಗಲ್ರಾನಿ ಇದೀಗ ತೆಲುಗಿನಲ್ಲಿ ಸ್ವರ್ಣಖಡ್ಗಂ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಧಾರಾವಾಹಿಯಲ್ಲಿ ಮಹಾದಾತ್ರಿ ಎಂಬ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂಜನಾ, ಮೊದಲ ಬಾರಿಗೆ ಕಿರಿತೆರೆ ಪ್ರವೇಶ ಮಾಡಿದ್ದಾರೆ.

ಅರ್ಕಾ ಮಿಡಿಯಾ ಸಂಸ್ಥೆಯ ಈ ಧಾರಾವಾಹಿ ನನ್ನ ಬದುಕಿಗೆ ಬಹು ದೊಡ್ಡ ತಿರುವು ನೀಡಲಿದೆ ಎನ್ನುವ ಸಂಜನಾ, “ಇದು ನನಗೆ ಮಹತ್ವಾಕಾಂಕ್ಷಿಯ ಧಾರಾವಾಹಿಯಾಗಿದ್ದು, ತೆಲುಗು ಭಾಷೆಯ ಈ ಸೀರಿಯಲ್ ಒಟ್ಟು 13 ಭಾಷೆಗಳಿಗೆ ಸೇರಿದಂತೆ, ಥಾಯ್ , ಸಿಂಗಪೂರ್, ಮಲಯಾ ಭಾಷೆಗಳಿಗೂ ಡಬ್ ಆಗಿ ಪ್ರಸಾರವಾಗಲಿದ್ದು , ಜೂನ್ ತಿಂಗಳ ಮೊದಲ ವಾರದಲ್ಲಿ ಮೂಡಿ ಬರಲಿದೆ” ಎನ್ನುತ್ತಾರೆ.

ಮಹಾದಾತ್ರಿ ಪಾತ್ರ ಕಲ್ಪಿತ ಪಾತ್ರವಾಗಿದ್ದು, ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಪಾತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಡಿಟ್ಟುಕೊಂಡಿದ್ದಾರಂತೆ. ಮಹಾರಾಣಿ ಪತ್ರಕ್ಕಾಗಿ ಕತ್ತಿವರಸೆ, ಕುದುರೆ ಸವಾರಿಯನ್ನು ಕಲಿತ್ತಿದ್ದಾರಂತೆ ಸಂಜನಾ ಹಾಗೂ ಅವರೇ ಆಯಾ ಪ್ರಾದೇಶಿಕ ಭಾಷೆಯನ್ನು ಕಲಿತು ಅವರೇ ತಮ್ಮ ಪಾತ್ರಕ್ಕೆ ವಾಯ್ಸ್ ನೀಡುತ್ತಾರಂತೆ.

ಸತ್ಯ ನಾರಾಯಣ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸ್ವರ್ಣಖಡ್ಗಂ ಧಾರಾವಾಹಿಯ ಒಂದು ಸಂಚಿಕೆಯ ಬಜೆಟ್ ನಲವತ್ತರಿಂದ ಐವತ್ತು ಲಕ್ಷ ರೂಪಾಯಿಯಂತೆ. ಇದರಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ವೆಚ್ಚವೂ ಸೇರಿದೆಯಂತೆ.

Tags

Related Articles

Leave a Reply

Your email address will not be published. Required fields are marked *