ಸುದ್ದಿಗಳು

ಸಲ್ಮಾನ್ – ಶಾರೂಖ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾದ ಸಂಜಯ್ ಲೀಲಾ ಬನ್ಸಾಲಿ

ಮುಂಬೈ, ಮಾ.14:

ನಟ ಸಂಜಯ್ ಲೀಲಾ ಬನ್ಸಾಲಿ ಚಿತ್ರ ಮಾಡುತ್ತಾರೆ ಎಂದರೆ ಅದರಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ,  ಐತಿಹಾಸಿಕ ಪಾತ್ರಗಳು , ಅದ್ದೂರಿ ಸೆಟ್ ಗಳು ಜನರ ಗಮನ ಸೆಳೆಯುತ್ತದೆ. ಈ ಬಾರಿ ಸಂಜಯ್ ಲೀಲಾ ಬನ್ಸಾಲಿ 1952ರ ಕ್ಲಾಸಿಕ್ ಸಿನಿಮಾಗಳದೊಂದಿಗೆ ತೆರೆಗೆ ಬರುತ್ತಿದ್ದಾರಂತೆ.

ಅಷ್ಟೇ ಅಲ್ಲದೆ ಸಂಜಯ್ ಲೀಲಾ ಬನ್ಸಾಲಿ ಏಕಕಾಲದಲ್ಲಿ ಮೂರು ಸಿನಿಮಾಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಬನ್ಸಾಲಿ ಅವರು ಬಾಜು ಬವಾರಾ ಚಿತ್ರವನ್ನು ರಿಮೇಕ್ ಮಾಡಲು ನಿರ್ಧರಿಸಿದ್ದು ಈ ಚಿತ್ರವನ್ನು  ವಿಜಯ್ ಭಟ್ ನಿರ್ದೇಶಿಸಿದ್ದರು. ಮ್ಯೂಸಿಕಲ್ ಡ್ರಾಮ  ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇದೇ ಚಿತ್ರವನ್ನು ರಿಮೇಕ್ ಮಾಡಲು ಬನ್ಸಾಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

1952ರ ಮ್ಯೂಸಿಕಲ್ ಡ್ರಾಮದ ರಿಮೇಕ್ !

ಸಂಜಯ್ ಲೀಲಾ ಬನ್ಸಾಲಿ ಅವರು ರಿಮೇಕ್ ಮಾಡಲು ಹೊರಟಿರುವ ಈ ಮ್ಯೂಸಿಕಲ್ ಡ್ರಾಮದಲ್ಲಿ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದ್ದು, ಫಿಮೇಲ್ ಲೀಡ್ ನಲ್ಲಿ ಪ್ರಿಯಾಂಕ ಚೋಪ್ರಾ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಬನ್ಸಾಲಿ ಅವರು ಬೈಜನಾತ್, ಬೈಜು ಮತ್ತು ಬೈಜು ತಾನ್ ಸೇನ್ ಎಂದು ಮೂರು ಹೆಸರನ್ನು ಆಯ್ಕೆ ಮಾಡಿದ್ದು ಇವುಗಳಲ್ಲಿ ಒಂದು ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಇನ್ನೂ ಉಳಿದ ಎರಡು ಚಿತ್ರಗಳಲ್ಲಿ ಒಂದು ಚಿತ್ರಕ್ಕೆ ,  ದಿಲ್ ದೆ ದಿವಾ ಇನ್ಸಾಲ್ಲಾ ಮತ್ತು ಪ್ಯಾರ್ ಹೋ ಗಯಾ ಇನ್ಸಾಲ್ಲಾ ಎಂಬ ಎರಡು ಹೆಸರಲ್ಲಿ ಒಂದು ಹೆಸರು ಅಂತಿಮಗೊಳ್ಳಲಿದ್ದರೆ ಮತ್ತೊಂದು ಚಿತ್ರಕ್ಕೆ ಗಂಗೂಬಾಯಿ ಎಂಬ ಹೆಸರು ಫೈನಲ್ ಆಗಿದೆ ಎನ್ನಲಾಗಿದ್ದು, ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ನಿರ್ದೇಶಕರು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಆರಂಭದಿಂದಲೂ ಸಿಕ್ಕಾಪಟ್ಟೆ ಕಾಂಟ್ರೋವರ್ಸಿಯಿಂದಲೇ ಸುದ್ದಿಯಾಯ್ತು. ಇಷ್ಟಾದರೂ ಚಿತ್ರ ಸೂಪರ್ ಹಿಟ್ ಆಯ್ತು.

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

#balkaninews #sanjayleelabhansali #salmankhanandshahrukhkhan #salmankhanmovies #sharukhkhanmovies

Tags