ಸುದ್ದಿಗಳು

ಇನ್ಫೋಸಿಸ್ ನಾರಾಯಣ ಮೂರ್ತಿ ಜನ್ಮದಿನ: ಶುಭಾಶಯ ತಿಳಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

ಭಾರತದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿಯವರು ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ. ಇವರ ಜನ್ಮದಿನಕ್ಕೆ ಸಾಮಾನ್ಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಹ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

‘ಕನ್ನಡದ ಹೆಮ್ಮೆ ನಾರಾಯಣ ಮೂರ್ತಿ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಸಂತೋಷ್ ಆನಂದ್ ರಾಮ್ ರವರು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯ ‘ಯುವರತ್ನ’ ಚಿತ್ರದಲ್ಲಿ ಬ್ಯೂಸಿಯಾಗಿರುವ ಇವರು, ಈ ಹಿಂದೆ ‘ಮಿಸ್ಟರ್ ಆ್ಯಂಡ್ ಮಿಸ್ಟರ್ ರಾಮಾಚಾರಿ’ ಹಾಗೂ ‘ರಾಜಕುಮಾರ’ ಚಿತ್ರಗಳನ್ನು ನಿರ್ದೇಶಿಸಿದ್ದರು.

ಇನ್ನೊಂದು ವಿಶೇಷವೆಂದರೆ, ಈ ದಂಪತಿಗಳ ಜೀವನಚರಿತ್ರೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಡಲು, ನಿರ್ಮಾಪಕರಾದ ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ತಯಾರಿ ನಡೆಸಿದ್ದಾರೆ. ಇನ್ನು ಇವರ ವ್ಯಕ್ತಿತ್ವಕ್ಕೆ ತಕ್ಕುದಾದ ಪಾತ್ರವರ್ಗಗಳನ್ನು ಆಯ್ಕೆ ಮಾಡಲು ಸದ್ಯದಲ್ಲಿಯೇ ಆಡಿಷನ್ ಕರೆಯಲಿದ್ದು ಅಧಿಕೃತ ಮಾಹಿತಿ ಸದ್ಯದಲ್ಲಿಯೇ ಹೊರಬೀಳಲಿದೆ.

ಅಂದ ಹಾಗೆ ಮೊನ್ನೆಯಷ್ಟೇ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿಯವರ ಜನ್ಮದಿನವಿತ್ತು. ಅಂದು ಸಹ ಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ವಿಶ್ ಮಾಡಿದ್ದರು.ಈ ದಂಪತಿಗಳು ನೂರು ಕಾಲ ಸುಖವಾಗಿರಲಿ ಎಂದು ನಾರಾಯಣ ಮೂರ್ತಿ ಅವರಿಗೆ ಬಾಲ್ಕನಿ ನ್ಯೂಸ್ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತದೆ.

ಹುಚ್ಚನಂತೆ ಓಡಾಡುತ್ತಿರುವ ‘ಹುಚ್ಚ ವೆಂಕಟ್’ನ ಹುಡುಕಾಟದಲ್ಲಿ ‘ರಾಂಧವ’ ತಂಡ

#SanthoshAnandram #narayanMurthy #birthdayWishes #rajkumar, #sudhamurthy #yuvarathna

Tags