ಸುದ್ದಿಗಳು

ಪ್ರೇಮದ ಬಲೆಗೆ ಬಿದ್ದ ಸೈಫ್ ಪುತ್ರಿ ಸಾರಾ..!

ಮುಂಬೈ, ಫೆ.11:

ಬಾಲಿವುಡ್ ನ ಯುವ ನಟಿಯರಲ್ಲಿ ಸಾರಾ ಅಲಿ ಖಾನ್ ಒಬ್ಬರಾಗಿದ್ದಾರೆ. ‘ಕೇದಾರ್ ನಾಥ್’ ಚಿತ್ರದ ಮೂಲಕ ಪ್ರಥಮ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಿದರು. ‘ಕೇದಾರನಾಥ್’ ನಂತರ, ಸಾರಾ ಎರಡನೇ ಚಿತ್ರ ‘ಸಿಂಬಾ’ ಕೂಡಾ 2018 ರ ಬಾಲಿವುಡ್ ನ ಅತಿ ದೊಡ್ಡ ಹಿಟ್ ಚಿತ್ರವಾಯಿತು.

ಇಂದು ಬಾಲಿವುಡ್ ನ ಅಗ್ರ ನಟಿಯರಲ್ಲಿ ಸಾರಾ ಅಲಿ ಖಾನ್ ಒಬ್ಬಳಾಗಿದ್ದಾಳೆ. ಸಾರಾ ತನ್ನ ಓಪನ್‌ ಮೈಂಡ್ ವ್ಯಕ್ತಿತ್ವದ ಕಾರಣದಿಂದ ಎಲ್ಲರ ಪಾಲಿಗೂ ನೆಚ್ಚಿನ ನಟಿಯಾಗಿದ್ದಾರೆ.  ಇತ್ತೀಚಿಗೆ ಈಕೆ ತನ್ನ ಮೊದಲ ಕ್ರಶ್ ಕುರಿತು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದರು. ಕಾರ್ತಿಕ್ ಆರ್ಯನ್ ಈಕೆಯ ಪ್ರೇಮಿ. ಈ ಹುಡುಗನ ಹೊರತುಪಡಿಸಿ ಯಾರೊಬ್ಬರನ್ನ ನಾನು ಸದ್ಯ ಲವ್ ಮಾಡುತ್ತಿಲ್ಲ ಎಂದು ಸಾರಾ ಹೇಳಿಕೊಂಡಿದ್ದಾರೆ.

ಬಾಲಿವುಡ್ ಗೆ ಎಂಟ್ರಿಯಾಗುವ ಮೊದಲು ಓರ್ವ ಯುವಕನ ಜೊತೆಗೆ ಡೇಟಿಂಗ್ ಮಾಡುತ್ತಿದ್ದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ಹುಡುಗನ ಹೆಸರು  ವೀರ್ ಪಹರಿಯಾ. ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆಯ ಮೊಮ್ಮಗ ಈತ. ಮತ್ತು ಉದ್ಯಮಿ ಸಂಜಯ್ ಪಹರಿಯಾ ಅವರ ಮಗ. ಸದ್ಯ ಸಾರಾ ಅಲಿ‌ ಖಾನ್ ಬೇರೊಬ್ಬ ಯುವಕ ಕಾರ್ತಿಕ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದು ಇವರಿಬ್ಬರು ಜೊತೆಗಿರುವ ಫೋಟೋ ಗಳು ವೈರಲ್ ಆಗಿವೆ. ಅದೇನೇ ಇರಲಿ, ಬಾಲಿವುಡ್ ಗೆ ಚೊಚ್ಚಲವಾಗಿ ಎಂಟ್ರಿಯಾಗಿರುವ ನಟ ನಟಿಯರು ಮುಂದಿನ ಹಾದಿಯನ್ನು ಗಟ್ಟಿಗೊಳಿಸಬೇಕು. ಅದು ಬಿಟ್ಟು ಲವ್, ಡೇಟಿಂಗ್, ಆಫೇರ್ ಗಳಿಗೆ ಬಲಿಯಾಗದಿರಲಿ ಎಂದಿದ್ದಾರೆ.

ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆಯನ್ನೂ ಮೀರಿಸಿದ್ರೂ ನಟಿ ಸಾರಾ ಅಲಿ ಖಾನ್

#saraalikhan #bollywood #hindimovies #balkaninews #saifalikhan #saifalikhanboyfriends #saraalikhanboyfriends

Tags