
ಸುದ್ದಿಗಳು
ಕಾರ್ತಿಕ್ ಜೊತೆ ಡುಯೇಟ್ ಮಾಡಲ್ವಂತೆ ಸಾರಾ ಖಾನ್..!
ಮುಂಬೈ, ಫೆ.12:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಯುವ ನಟಿ. ಕಳೆದ ಕೆಲವು ದಿನಗಳಿಂದ ಸಾರಾ ಅಲಿ ಖಾನ್ ನಿರ್ದೇಶಕ ಇಮ್ತಿಯಾಜ್ ಅಲಿಯವರ ‘ಲವ್ ಆಜ್ ಕಲ್ – 2’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವುದು ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ಈಕೆಯ ಪ್ರಿಯಕರ ಕಾರ್ತಿಕ್ ಆರ್ಯಾನ್ ಜೊತೆ ಪರದೆಯಲ್ಲಿ ನಟಿಸುತ್ತಾರೆ ಅನ್ನುವುದು ಮತ್ತೊಂದು ಭಾರೀ ಸುದ್ದಿಯಾಗಿತ್ತು. ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ಈಕೆ ಈ ಹೊಸ ಪ್ರಾಜೆಕ್ಟ್ ನಿಂದ ಹೊರಗೆ ಹೋಗಿದ್ದಾರೆ ಅನ್ನುವುದು ಔಟ್ ಆಗಿದೆ. ಕೆಲವು ಸ್ಕ್ರಿಪ್ಟ್ ವಿವಾದಗಳ ಕಾರಣದಿಂದ ಸಾರಾ ಅಲಿ ಖಾನ್ ಈ ಚಲನಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ.
ನಿರ್ದೇಶಕ ಇಮ್ತಿಯಾಝ್ ಅಲಿಯವರ ಹೊಸ ಚಿತ್ರದಲ್ಲಿ ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್ ತಂದೆಯಾಗಿ ನಟಿಸಬಹುದು ಎನ್ನುವುದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ ಈಗ ಸಾರಾ ಅಲಿ ಖಾನ್ ಈ ಚಿತ್ರದಲ್ಲಿ ನಟಿಸಲ್ಲ ಎಂದಾಗ ಈ ಊಹೆ ಎಲ್ಲಾ ಉಲ್ಟಾ ಆಗಿದೆ. ಮೂಲ ಹಿಟ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಸಹ ‘ ಲವ್ ಆಜ್ ಕಲ್ ‘ ಮೊದಲ ಆವತರಣಿಕೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
2009ರಲ್ಲಿ ಬಿಡುಗಡೆಯಾದ “ಲವ್ ಆಜ್ ಕಲ್ ‘ ಯುವಕರಲ್ಲಿ ಒಂದು ಕ್ರೇಜ್ ಹುಟ್ಟಿಸಿತ್ತು. ಈ ಚಿತ್ರವು ಪ್ರಸ್ತುತ ಮತ್ತು ಹಳೆಯ ಕಾಲದಲ್ಲಿನ ಮಾನವ ಸಂಬಂಧಗಳ ಸಂಕೀರ್ಣತೆಗಳನ್ನು ಗುರುತಿಸಿತ್ತು. ಈ ಚಿತ್ರದಲ್ಲಿ ನೀತು ಕಪೂರ್ ಮತ್ತು ರಿಷಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಾರಾ ಅಲಿ ಖಾನ್ ಜೊತೆ ಒಂದು ಪ್ರಶ್ನೆ ಕೇಳಲಾಗಿತ್ತು. ನೀವು ನಿಮ್ಮ ತಂದೆ ಸೈಫ್ ಅಲಿ ಖಾನ್ ಜೊತೆ ಕೆಲಸ ಮಾಡಲು ಇಷ್ಟಪಡುತ್ತೀರಾ ಎಂದು ಕೇಳಿದಾಗ, “ನಾನು ಅಬ್ಬ ಜೊತೆಗೆ ಒಂದು ಚಿತ್ರ ಮಾಡಲು ಇಷ್ಟಪಡುತ್ತೇನೆ. ಆದರೆ, ಆ ಚಲನಚಿತ್ರ ಮತ್ತು ನಮ್ಮ ಪಾತ್ರಗಳು ನಮ್ಮ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಬೇಕು’ ಎಂದಿದ್ದರು.
#saralikhan #balkaninews #saraalikhanandsaifalikhan #saifalikhan #saraalikhansimmbamovie #kartikaryanandsaraalikhan