ಸುದ್ದಿಗಳು

ಸರಿಗಮಪ ಆಡಿಶನ್ ನಲ್ಲಿ ಆಯ್ಕೆಯಾದ ಮರಿಕೋಗಿಲೆ…!

ಬೆಂಗಳೂರು, ಮಾ.06:

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಪ್ರಸಿದ್ಧ ಸಂಗೀತ ಕಾರ್ಯಕ್ರಮ ಸರಿಗಮಪ ಮತ್ತೆ ಶುರುವಾಗಿದೆ. ಕಳೆದ ವಾರವಷ್ಟೇ ಸರಿಗಮಪ ಸೀಸನ್ 15 ರ ವಿಜೇತರಾಗಿ ಕೀರ್ತನ್ ಹೊಳ್ಳ ಮತ್ತು ರನ್ನರ್ ಅಪ್ ಆಗಿ ಹನುಮಂತಪ್ಪ ಆಯ್ಕೆ ಆಗಿದ್ದು ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಇದೀಗ ಸೀಸನ್ 16 ರ ಮೆಗಾ ಆಡಿಷನ್ ಕಳೆದ ಶನಿವಾರದಿಂದ ಆರಂಭವಾಗಿದೆ.

ಮರಿಕೋಗಿಲೆಗಳ ದರ್ಬಾರು

ಹೌದು. ಈ ಬಾರಿಯ ಸೀಸನ್ ಕೇವಲ ಮರಿ ಕೋಗಿಲೆಗಳಿಗೆ ಮೀಸಲು. ಸಂಗೀತ ಪ್ರಿಯರ ಮನ ಸೆಳೆಯಲು ಮರಿಕೋಗಿಲೆಗಳು ಬಂದಾಯ್ತು. ಕಳೆದ ವಾರ ನಡೆದ ಮೆಗಾ ಆಡಿಷನ್ ನಲ್ಲಿ ಐದು ಮಕ್ಕಳು ಆಯ್ಕೆ ಆಗಿದ್ದಾರೆ. ಸಂತಸದ ವಿಚಾರವೆಂದರೆ ಇದರಲ್ಲಿ ಈಜಿಪ್ಟ್ ಹುಡುಗಿ ಕೂಡ ಒಬ್ಬಳು ಆಯ್ಕೆಯಾಗಿದ್ದಾಳೆ.

ಮುದ್ದು ಮುಖದ ಹುಡುಗಿ ಪರ್ಣಿಕಾ ಯಶೋದರ್ ಹುಟ್ಟಿದ್ದು ದೂರದ ಈಜಿಪ್ಟ್‌ ನಲ್ಲಿ.  ಆದರೆ, ಸದ್ಯ ಇವರು ಮಹಾನಗರಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ‌. ಯುಕೆಜಿ ಓದುತ್ತಿರುವ ಪರ್ಣಿಕಾ ಸರಿಗಮಪಗೆ ಆಯ್ಕೆ ಆಗಿದ್ದಾರೆ. ಮುದ್ದು ಕಂದಮ್ಮ ಸೊಗಸಾಗಿ ಹಾಡಿದ ಸಂಪಿಗೆ ಮರದ ಹಸಿರೆಲೆ ನಡುವೆ ಹಾಡಿಗೆ ಮೂರು ತೀರ್ಪುಗಾರರು ಮನ ಸೋತಿದ್ದಾರೆ. ಇಂತಿಪ್ಪ ಪರ್ಣಿಕಾಳನ್ನು  ಲಿಟಲ್ ಚಾಂಪ್ಸ್ ಸೀಸನ್ ನ  “ವಿಶೇಷ ಸ್ಪರ್ಧಿ” ಎಂದು ಆಯ್ಕೆ ಮಾಡಲಾಗಿದೆ. ಈ ಸೀಸನ್ ಮುಗಿಯುವವರೆಗೆ ಪರ್ಣಿಕಾಗೆ ಹಾಡುವ ಅವಕಾಶವನ್ನು ನೀಡಲಾಗಿದೆ. ಇನ್ನುಳಿದ ಮೆಗಾ ಆಡಿಷನ್ ಎಪಿಸೋಡ್ ನಲ್ಲಿ ಮುಂದಿನ ಶನಿವಾರ ಮತ್ತು‌ ಭಾನುವಾರ ಪ್ರಸಾರವಾಗಲಿದೆ.

ದರ್ಶನ್ ನೋಡಿದ ಮೊದಲ ಪ್ರೀಮಿಯರ್ ಶೋ ಇದು…?

#zeekannada #megaaudition #balkaninews #sarigamapa #sarigamapaaudition

Tags

Related Articles