ಸುದ್ದಿಗಳು

ಸರಿಗಮಪ ವೇದಿಕೆಯಲ್ಲಿ ಶುರುವಾಯ್ತು ಅನಂತನಾಗ್ ಹವಾ

ಬೆಂಗಳೂರು, ಏ.20:

ಸರಿಗಮಪ ಲಿಟಲ್ ಚಾಂಪ್ಸ್ ಈಗಾಗಲೇ ಆರಂಭವಾಗಿದೆ. ಸುಂದರವಾದ ವೇದಿಕೆಯ ಮೇಲೆ ಮರಿಕೋಗಿಲೆಗಳು ಬಂದು ತಮ್ಮ ಗಾನ ಸುಧೆಯ ರಸದೌತಣವನ್ನು ಸಂಗೀತ ಪ್ರಿಯರಿಗೆ ಪ್ರತಿ ವಾರ ಉಣಬಡಿಸುತ್ತಾರೆ. ಸಂಗೀತ ಪ್ರಿಯರಿಗೆ ಈ ವಾರ ಬಹಳ ವಿಶೇಷ. ನಿಮ್ಮ ನೆಚ್ಚಿನ ಸಂಗೀತ ಕಾರ್ಯಕ್ರಮಕ್ಕೆ ಈ ಭಾರಿ ವಿಶೇಷ ಅತಿಥಿಗಳಾಗಿ ಹಿರಿಯ ಕಲಾವಿದ ಅನಂತನಾಗ್ ಬರಲಿದ್ದಾರೆ.

ಸರಿಗಮಪ ವೇದಿಕೆಯಲ್ಲಿ ಮಕ್ಕಳ ಸುಮಧುರ ಗಾಯನ ಕೇಳಿ ಅನಂತನಾಗ್ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಸಂತಸದ ವಿಚಾರವೆನೇಂದರೆ ಅನಂತನಾಗ್ ಅಭಿನಯಿಸಿದ ಸಿನಿಮಾ ಹಾಡುಗಳನ್ನು ನೀವು ಈ ಬಾರಿಯ ಸರಿಗಮಪ ಕಾರ್ಯಕ್ರಮದಲ್ಲಿ ಕೇಳಬಹುದು.

ಪ್ರತಿ ವಾರ ಭಿನ್ನ ಭಿನ್ನ ವಿಷಯಗಳ ಮೂಲಕ ಸುದ್ದಿಯಲ್ಲಿರುವ ಸರಿಗಮಪ ಕಳೆದ ವಾರ ಸರ್ಕಾರಿ ಶಾಲೆ ಮಕ್ಕಳ ವಿಶೇಷ ಸಂಚಿಕೆ ಮಾಡುವ ಮೂಲಕ ವೀಕ್ಷಕರ ಮನ ಸೆಳೆದಿತ್ತು. ಇದೀಗ ಈ ವಾರ ಮೆಲೋಡಿ ಸುತ್ತಿನ ಮೂಲಕ ಲಿಟಲ್ ಚಾಂಪ್ಸ್ ಗಳು ನಿಮ್ಮ ಮುಂದೆ ಬರಲಿದ್ದಾರೆ.

ಸಾಮಾನ್ಯವಾಗಿ ಸರಿಗಮಪ ಕಾರ್ಯಕ್ರಮಕ್ಕೆ ಅತಿಥಿಗಳು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದು ತುಂಬಾ ಕಡಿಮೆ. ಆದರೆ ಕೆಲವು ಭಾರಿ ವಿಶೇಷ ಅತಿಥಿಗಳು ಈ ಸ್ವರ ವೇದಿಕೆಯ ಮೇಲೆ ಬರುತ್ತಾರೆ. ಮಾತ್ರವಲ್ಲ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತಾರೆ.

ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಕವಲುದಾರಿ’ ಚಿತ್ರದಲ್ಲಿ ಅನಂತನಾಗ್ ಅಭಿನಯಿಸಿದ್ದಾರೆ. ಅನಂತನಾಗ್ ಅವರ ಜೊತೆ ‘ಕವಲುದಾರಿ’ ಯ ಮೂಲಕ ಮನೆ ಮಾತಾಗಿರುವ ಚಿತ್ರದ ನಾಯಕ ರಿಷಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಕೂಡಾ ಕಾರ್ಯಕ್ರಮಕ್ಕೆ ಆರಂಭಿಸಲಿದ್ದಾರೆ.

ನಿಶ್ಚಿತಾರ್ಥವಾದ ಸಂಭ್ರಮದಲ್ಲಿ ‘ಕವಲುದಾರಿ’ ರಿಷಿ

#balkaninews #sarigamapaseason16kannada #singingrealityshow #anantnag

Tags