ಸುದ್ದಿಗಳು

‘ಸರಿಲೇರು ನೀಕೆವ್ವರು’ ಟೀಸರ್ !! ಫ್ಯಾನ್ಸ್ ಫಿದಾ!!

ಸೂಪರ್‌ಸ್ಟಾರ್ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ‘ಸರಿಲೇರು ನೀಕೆವ್ವರು’  ಚಿತ್ರದ ಟೀಸರ್ ವಿಡಿಯೋ ಹೊರಬಂದಿದೆ. ಮಹೇಶ್ ಬಾಬು ಸೇನಾ ಅಧಿಕಾರಿಯಾಗಿ ಸೂಪರ್ ಫಿಟ್ ಆಗಿ ಕಾಣುತ್ತಾರೆ.

ಕಾಶ್ಮೀರದ ಸುಂದರವಾದ ಸ್ಥಳಗಳಲ್ಲಿ ಬ್ಯೂಟಿಫುಲ್ ದೃಶ್ಯಗಳನ್ನು ಚಿತ್ರಿಸಲಾಗಿದೆ

ಸರಿಲೇರು ನೀಕೆವ್ವರು ಟೀಸರ್ ವಿಡಿಯೋ ಟಾಲಿವುಡ್ ಪ್ರೇಕ್ಷಕರಿಗೆ ಹಬ್ಬದೂಟ ನೀಡಿದ್ದು ಮತ್ತು ಮಹೇಶ್ ಬಾಬು ಬರ್ತಡೇ ಗೆ ಗಿಫ್ಟ್ ಆಗಿತ್ತು.. ಸರಿಲೇರು ನೀಕೆವ್ವರು ಚಿತ್ರದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ನಾಯಕಿ ಮತ್ತು ಹಿರಿಯ ನಟಿ ವಿಜಯಶಾಂತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಫ್ಯಾಮಿಲಿ-ಎಂಟರ್‌ಟೈನರ್ ಚಿತ್ರವು  ಸಂಕ್ರಾಂತಿ 2020 ರಂದು ಚಿತ್ರಮಂದಿರಗಳನ್ನು ತಲುಪಲು ಸಜ್ಜಾಗಿದೆ. ಅನಿಲ್ ರವಿಪುಡಿ ಮತ್ತು ಅವರ ತಂಡವು ಈ ಚಿತ್ರಕ್ಕಾಗಿ ಬೃಹತ್ ಸೆಟ್ ಅನ್ನು ನಿರ್ಮಿಸಿದೆ ಎಂದು ಹೇಳಲಾಗಿದೆ..

ಈ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜಿ.ಮಹೇಶ್ ಬಾಬು ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸಿವೆ.

Tags