ಸುದ್ದಿಗಳು

ಟೈಟಲ್ ಸಾಂಗ್ ಮೂಲಕ ಭಾರತೀಯ ಸೈನ್ಯಕ್ಕೆ ಗೌರವ ಸಲ್ಲಿಸಿದ ‘ಸರಿಲೇರು ನಿಕೇವರು’ ಚಿತ್ರತಂಡ

‘ಸರಿಲೇರು ನಿಕೇವರು’ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಆರ್ಮಿ ಮೇಜರ್ ಅಜಯ್ ಕೃಷ್ಣ ಅವರ ಪಾತ್ರ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಚಿತ್ರದ ಟೈಟಲ್ ಸಾಂಗ್ ಅನಾವರಣಗೊಳಿಸಲಾಗಿದ್ದು, ಹಾಡಿನ ಮೂಲಕ ಭಾರತೀಯ ಸೈನ್ಯಕ್ಕೆ ಗೌರವ ಸಲ್ಲಿಸಲಾಗಿದೆ.

ಈ ಟೈಟಲ್ ಸಾಂಗ್ ನಲ್ಲಿ ಸೂಪರ್ ಸ್ಟಾರ್ ಡ್ಯಾಶಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸೈನ್ಯದ ಸಮವಸ್ತ್ರ, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರಂತೆ ಕಾಣುತ್ತಾರೆ.

ಹಾಡಿನಲ್ಲಿ ಇಂಡೋ-ಪಾಕಿಸ್ತಾನ ಯುದ್ಧ, ಸೈಚೆನ್ ಸಂಘರ್ಷ 1984, ಕಾರ್ಗಿಲ್ ಯುದ್ಧ 1999 ಮತ್ತು ಸರ್ಜಿಕಲ್ ಸ್ಟ್ರೈಕ್ 2016ರ ಕೆಲವು ತುಣುಕುಗಳೊಂದಿಗೆ ಭಾರತೀಯ ಸೇನಾ ಸಿಬ್ಬಂದಿಯ ಉತ್ಸಾಹಭರಿತ ಹೋರಾಟವನ್ನು ಎತ್ತಿ ತೋರಿಸಲಾಗಿದೆ. ಒಟ್ಟಾರೆಯಾಗಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನುಈ ಮೂಲಕ ಕೋರಲಾಗಿದೆ.

ಚಿತ್ರದ ನಿರ್ದೇಶಕ ಅನಿಲ್ ರವಿಪುಡಿ ಸೈನ್ಯದ ಹಿನ್ನೆಲೆಯನ್ನು ಭಾವನಾತ್ಮಕವಾಗಿ ಪ್ರಸ್ತುತಪಡಿಸಿದ್ದಾರೆ. ಅಂದಹಾಗೆ ಈ ಚಿತ್ರದ ಯಶಸ್ಸು ಕಾಶ್ಮೀರದಲ್ಲಿ ಚಿತ್ರೀಕರಿಸಿದ ದೃಶ್ಯಗಳು ಹೇಗೆ ರೂಪುಗೊಂಡಿವೆ ಎಂಬುದರ ಮೇಲೆ ಅವಲಂಬಿತವಾಗಿದೆಯಂತೆ. ಚಿತ್ರೀಕರಣ ಭರದಿಂದ ಸಾಗಿದ್ದು, 2020ರಂದು ಪೊಂಗಲ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ.

ನೆರೆ ಸಂತ್ರಸ್ತರಿಗೆ ನೆರವಾದ “ಧ್ರುವತಾರೆ” ಗಳಿಗೆ ಸಮರ್ಪಿತವಾಯ್ತು “ಪೈಲ್ವಾನ್” ಸಾಂಗ್

#balkaninews #sarileruneekevvaru #maheshbabu #indianarmy

Tags