ಸುದ್ದಿಗಳು

ಸರ್ಜಾ ಫ್ಯಾಮಿಲಿ ಒಂದೇ ಫ್ರೇಮ್ ನಲ್ಲಿ

ಬೆಂಗಳೂರು,ಮಾ.26: ಇಡೀ ಸರ್ಜಾ ಫ್ಯಾಮಿಲಿ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ‌.

ಸರ್ಜಾ ಫ್ಯಾಮಿಲಿ ಇದೀಗ ಸಂಪೂರ್ಣವಾಗಿ ಸಿನಿಮಾ ಇಂಡಸ್ಟ್ರೀಯಲ್ಲಿದೆ‌. ಅರ್ಜುನ್ ಸರ್ಜಾ ಹಾಗೀ ಅವರ ಪತ್ನಿ ಸಿನಿಮಾ ಇಂಡಸ್ಟ್ರಿ ಯಿಂದಲೇ ಬಂದಿರುವುದು. ಇದೀಗ ಇವರ ನಂತರ ಅವರ ಅಳಿಯಂದಿರಾದ ನಟ ಚಿರು ಹಾಗೂ ಧೃಚ ಸರ್ಜಾ ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಇವರ ಜೊತೆಗೆ ಅರ್ಜುನ್ ಸರ್ಜಾ ಪುತ್ರಿ ಕೂಡ ಸಿನಿಮಾ ರಂಗವೇ. ಇನ್ನು ಚಿರು ಸರ್ಜಾ ಪತ್ನಿ ಮೇಘನಾ ಕೂಡ ಸಿನಿಮಾ ಇಂಡಸ್ಟ್ರಿ ಯೇ.

ಟ್ವಿಟ್ ಮಾಡಿದ ಚಿರು

ಇದೀಗ ಈ ಇಡೀ ಕುಟುಂಬವೇ ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಇಡೀ ಫ್ಯಾಮಿಲಿ ಒಂದಾಗೋದು ಕೊಂಚ ಕಡಿಮೆಯೆ. ಬ್ಯುಸಿ ಶೆಡ್ಯುಲ್ಡಲ್ಲಿ ಸಮಯಾವಕಾಶ ಕೊಡೋದು ಕೂಡ ಕಡಿಮೆಯೆ. ಆದರೆ ಇದೀಗ ಈ ಬ್ಯುಸಿ ಶೆಡ್ಯುಲ್ಡ್ ಅಲ್ಲಿ ಸರ್ಜಾ ಫ್ಯಾಮಿಲಿ ಒಂದಾಗಿದೆ. ಇನ್ನು ಈ ಫೋಟೋವನ್ನು ಚಿರು ಸರ್ಜಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸರ್ಜಾ ಫ್ಯಾಮಿಲಿ ಒಂದೇ ಫ್ರೇಮ್ ನಲ್ಲಿ ಅಂತಾ ಬರೆದುಕೊಂಡಿದ್ದಾರೆ.

ಯಾರೆಲ್ಲಾ ಇದ್ದಾರೆ ಒಂದೇ ಫ್ರೇಮ ನಲ್ಲಿ

ಇನ್ನು ಈ ಪ್ರೇಮ್ ನಲ್ಲಿ ಚಿರಂಜೀವಿ ಸರ್ಜಾ ತಾಯಿ, ಚಿರಂಚೀವಿ ಸರ್ಜಾ, ಅವರ ಪತ್ನಿ ಮಗಳು, ಚಿರು ಸರ್ಜಾ ಹಾಗೂ ಅವರ ಪತ್ನಿ ಮೇಘನಾ, ಧೃವ ಸರ್ಜಾ ಹಾಗೂ ಅವರ ಭಾವಿ ಪತ್ನಿ, ಇನ್ನು ಸಂಬಂಧಿಕರೆಲ್ಲಾ ಒಂದೇ ಕಡೆ ನಿಂತು ಫೋಟೋ ಒಂದನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಚಿರು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟ ಧೃವ ಸರ್ಜಾ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಚುನಾವಣಾ ಆಯೋಗಕ್ಕೆ ಸುಮಲತ ದೂರು…!!!

Tags