ಸುದ್ದಿಗಳು

‘ಸರ್ಕಾರ್’ ಸಿನಿಮಾ ಮೊದಲ ದಿನ ಮಾಡಿರುವ ಗಳಿಕೆ ಎಷ್ಟು ಗೊತ್ತೆ…?

ವಿಜಯ್ ಹಾಗೂ ಕೀರ್ತಿ ಸುರೇಶ್ ಅಭಿನಯದ ಸಿನಿಮಾ

ಚೆನೈ, ನ.07: ನಿನ್ನೆಯಷ್ಟೆ ವಿಜಯ್‌ ಅಭಿನಯದ  ಬಹು ನಿರೀಕ್ಷಿತ ಸಿನಿಮಾ ‘ಸರ್ಕಾರ್’ ಬಿಡುಗಡೆಯಾಗಿದೆ. ಇದೀಗ ಮೊದಲ ದಿನಲ್ಲಿಯೇ ಕೋಟಿ ಕೋಟಿ ಗಳಿಕೆ ಮಾಡಿದೆ ಈ ಸಿನಿಮಾ. ನಿನ್ನೆ ಎಲ್ಲೆಡೆ ಚಿತ್ರ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದ ಮೊದಲ ದಿನದ ಗಳಿಕೆಯಲ್ಲೇ ದಾಖಲೆ ಮುರಿಯುವಂತಿದೆ.

ಒಂದೇ ದಿನಕ್ಕೆ ಕೋಟಿ ಕೋಟಿ ಗಳಿಸಿದ ‘ಸರ್ಕಾರ್’

ಹೌದು, ವಿಜಯ್ ಅಭಿನಯದ ‘ಸರ್ಕಾರ್’ ಬಿಡುಗಡೆಯಾದ ಒಂದೇ  ದಿನದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿ, ಗಲ್ಲಾ ಪೆಟ್ಟಿಯಲ್ಲಿ ಕೊಳ್ಳೆಯೊಡೆಯುವಂತೆ ಮಾಡಿದೆ. ಕೆಲವು ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಚಿತ್ರ 30ಕೋಟಿ ರೂ.ಗಳನ್ನು ಗಳಿಸಿದೆ. ಬಾಹುಬಲಿಯ ಒಂದು ದಿನದ ಗಳಿಕೆಯನ್ನು ಈ ಸಿನಿಮಾ ಮುರಿದಿದೆ ಎನ್ನಲಾಗುತ್ತಿದೆ. ಇನ್ನು ಚೆನ್ನೈನಲ್ಲಿ 2.37ಕೋಟಿ ರೂ, ಅಮೆರಿಕದಲ್ಲಿ 2.31ಕೋಟಿ ಮತ್ತು ಯುಕೆಯಲ್ಲಿ1.17 ಕೋಟಿ ರೂ.ಗಳನ್ನು ಗಳಿಸಿದೆ ಎಂದು ನಂಬಲಾರ್ಹ ಮೂಲಗಳು ವರದಿ ಮಾಡಿದೆ.

ರಾಜಕೀಯ ಕತೆಯಾಧಾರಿತ ‘ಸರ್ಕಾರ್’ ಚಿತ್ರಕ್ಕೆ ಎ ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಿದರೆ, ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೀರ್ತಿ ಸುರೇಶ್, ವರಲಕ್ಷ್ಮಿ ಶರತ್ ಕುಮಾರ್, ಯೋಗಿ ಬಾಬು, ರಾಧಾರವಿ ಸೇರಿದಂತೆ ಹಲವು ಮಂದಿ ಪ್ರಮುಖಪಾತ್ರದಲ್ಲಿದ್ದಾರೆ.

ಸರ್ಕಾರ ಹಾಗೂ ರಾಜಕೀಯ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದ್ದು, ಈಗಾಗಲೇ ಟ್ರೇಲರ್ ಕೂಡ ಬಹಳಷ್ಟು ಸದ್ದು ಮಾಡುವುದರ ಜೊತೆಗೆ ಅಭಿಮಾನಿಗಳಿಗೆ ಸಿನಿಮಾ ಮೇಲಿನ  ನಿರೀಕ್ಷೆಯನ್ನು ಹೆಚ್ಚಿಸಿತ್ತು. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಭರ್ಜರಿಯಾಗಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.

Tags