ಸುದ್ದಿಗಳು

ಶ್ರೀದೇವಿ ಪುತ್ರಿಗೆ ಕೋರಿಯೋಗ್ರಾಫಿ ಮಾಡುತ್ತಿದ್ದಾರಂತೆ ಡಾನ್ಸ್ ಗುರು ಸರೋಜ್ ಖಾನ್

ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

ಮುಂಬೈ, ನ.17: ದಿವಂಗತ ನಟಿ ಶ್ರೀದೇವಿ ಡಾನ್ಸ್ ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತೆ ಇದೆ. ನಟನೆ ಮಾತ್ರವಲ್ಲ ನೃತ್ಯದಲ್ಲೂ ಪ್ರಾವಿಣ್ಯತೆ ಪಡೆದಿದ್ದ ಶ್ರೀದೇವಿ ನೃತ್ಯಕ್ಕೆ ಡಾನ್ಸ್ ಗುರು ಸರೋಜಾ ಖಾನ್ ಫಿದಾ ಆಗಿದ್ದರಂತೆ. ಆದರೆ ಇತ್ತೀಚೆಗೆ ಅಕಾಲಿಕ ನಿಧನರಾದ ಶ್ರೀದೇವಿ ಸಾವಿನ ಸುದ್ದಿ ಸರೋಜಾ ಖಾನ್ ಗೆ ನಿಜಕ್ಕೂ ಅಘಾತವನ್ನೇ ತರಿಸಿತ್ತಂತೆ. ಆದರೆ ಈ ನೋವನ್ನು ಮರೆಯಲು ಹಾಗೂ ತನ್ನ ಶಿಷ್ಯೆ ಶ್ರೀದೇವಿಯನ್ನು ಅವರ ಮಗಳಲ್ಲಿ ಕಂಡುಕೊಳ್ಳಲು ಮುಂದಾಗಿರುವ ಸರೋಜ್ ಖಾನ್ ಇದೀಗ ಜೂನಿಯರ್ ಶ್ರೀದೇವಿ ಅಂದರೆ ಜಾಹ್ನವಿ ಕಪೂರ್ ಗೆ ನೃತ್ಯ ಹೇಳಲು ಮುಂದಾಗಿದ್ದಾರಂತೆ.

 

View this post on Instagram

 

My Darling.????✨ // @janhvikapoor

A post shared by Saroj Khan (@sarojkhanofficial) on

ತಾಯಿಯನ್ನೇ ಹೋಲುವ ಜಾಹ್ನವಿ ಕಪೂರ್

ಅಂದಹಾಗೆ ನಟಿ ಶ್ರೀದೇವಿ ಅದ್ಬುತ ನಟಿ. ತನ್ನ ರೂಪಲಾವಣ್ಯ. ನಟನೆಯ ವೈಖರಿ ಮಾತ್ರವಲ್ಲ ನೃತ್ಯದಲ್ಲೂ ಸೈ ಎನಿಸಿಕೊಂಡು ಒಬ್ಬ ಫರ್ಫೆಕ್ಟ್ ನಟಿ ಹೇಗಿರಬೇಕು ಎಂದರೆ ಎಲ್ಲರೂ ಶ್ರೀದೇವಿಯತ್ತ ಬೊಟ್ಟು ಮಾಡುತ್ತಿದ್ದರು. ಅಂತಹ ಅದ್ಬುತ ಕಲಾವಿದೆ ದುಬೈನಲ್ಲಿ ಕಳೆದ ಫೆಬ್ರವರಿಯಲ್ಲಿ ಅಕಾಲಿಕ ಸಾವನಪ್ಪಿದ್ದರು. ಆದರೆ ಶ್ರೀದೇವಿಯವರ ಹಿರಿಯ ಮಗಳು ಜಾಹ್ನವಿ ಕಪೂರ್ ಥೇಟ್ ಅಮ್ಮನ ರೂಪವನ್ನೇ ಎರವಲು ಪಡೆದಂತಿದ್ದಾರೆ ಎಂಬುದು ಹಲವರ ವಾದ. ಅವರ ನಗು, ಸೈಡ್ ಫೇಸ್ ಥೇಟ್ ಶ್ರೀದೇವಿಯವರು ಹರೆಯದಲ್ಲಿದ್ದಾಗ ಹೇಗೆ ಕಾಣುತ್ತಿದ್ದರೋ ಹಾಗೆ ಕಾಣಿಸುತ್ತದೆ. ಹೀಗಾಗಿ ಜಾಹ್ನವಿ ಕಪೂರ್ ಅವರನ್ನು ಶ್ರೀದೇವಿ ಅವರ ಜೆರಾಕ್ಸ್ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ನಟಿ ಜಾಹ್ನವಿ ಕಪೂರ್, ಸರೋಜ್ ಖಾನ್ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಜಾಹ್ನವಿಯೊಂದಿಗೆ ಫೋಟೋ ಕ್ಲಿಕ್ಲಿಸಿಕೊಂಡಿರುವ ಸರೋಜಾ ಖಾನ್ ಇದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ “ಮೈ ಡಾರ್ಲಿಂಗ್” ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅಂದಹಾಗೆ ನಟಿ ಶ್ರೀದೇವಿ ಹಾಗೂ ಜಾಹ್ನವಿ ನಡುವೆ ಸಿಕ್ಕಾಪಟ್ಟೆ ಸಾಮ್ಯತೆ ಎಂಬುದಕ್ಕೆ ಮನೀಶಾ ಮಲ್ಹೋತ್ರಾ ವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಫೋಟೋ ಕೂಡ ಸಾಕ್ಷಿ. ಶ್ರೀದೇವಿಯಂತೆ ಜಾಹ್ನವಿ ಗೋಚರಿಸಿರುವ ಕೆಲವೊಂದು ಫೋಟೋ ಇಲ್ಲಿದೆ ನೋಡಿ.

Tags

Related Articles