ಸುದ್ದಿಗಳು

‘ಸಾರ್ವಜನಿಕರಲ್ಲಿ ವಿನಂತಿ’: ಹೀರೋ ಒಳಗೊಬ್ಬ ವಿಲನ್ ಇರಬಹುದು!

ಟೀಸರ್ ಮೂಲಕವೇ ಪ್ರೇಕ್ಷಕರಲ್ಲಿ ತುಂಬು ಭರವಸೆ ಮೂಡಿಸಿ ಇದೇ ತಿಂಗಳ 21ರಂದು ಬಿಡುಗಡೆಯಾಗಲು ರೆಡಿಯಾಗಿರೋ ಚಿತ್ರ ‘ಸಾರ್ವಜನಿಕರಲ್ಲಿ ವಿನಂತಿ’. ಉಮಾ ನಂಜುಂಡಸ್ವಾಮಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಕೃಪಾ ಸಾಗರ್ ನಿರ್ದೇಶನ ಮಾಡಿದ್ದಾರೆ. ಈ ಮೂಲಕವೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡು ಒಂದೆರಡು ಚಿತ್ರಗಳಲ್ಲಿ ನೆಗೆಟಿವ್ ರೋಲಿನಲ್ಲಿ ನಟಿಸಿದ್ದ ಮದನ್ ರಾಜ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಮದನ್ ರಾಜ್ ಅವರಿಗೆ ಕಡೇ ತನಕ ಈ ಚಿತ್ರಕ್ಕೆ ತಾನೇ ಹೀರೋ ಎಂಬ ವಿಷಯ ಗೊತ್ತೇ ಇರಲಿಲ್ಲವಂತೆ. ಅವರು ಹೇಳಿಕೇಳಿ ರಂಗಭೂಮಿಯಿಂದ ಬಂದವರು. ಈ ಕಾರಣದಿಂದಲೇ ವಿಶಿಷ್ಟವಾದ, ಸವಾಲಿನ ಪಾತ್ರಗಳನ್ನೇ ಬಯಸುವಂಥಾ ಮನಸ್ಥಿತಿ ಹೊಂದಿರುವವರು ಮದನ್ ರಾಜ್. ಈಗಾಗಲೇ ನೆಗೆಟಿವ್ ರೋಲಿನಲ್ಲಿ ನಟಿಸಿದ್ದ ಅವರಿಗೆ ಇಲ್ಲಿ ಹೀರೋ ಆದರೂ ವಿಲನ್ ಶೇಡಿನ ಪಾತ್ರವೂ ಇದೆಯಂತೆ. ನಮ್ಮ ನಡುವೆ ಸಭ್ಯರ ಮುಖವಾಡಡ ತೊಟ್ಟಿರೋ ಮಂದಿಯೂ ಹೇಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಹುದೆಂಬ ಸಂದೇಶವನ್ನೂ ಈ ಪಾತ್ರ ರವಾನಿಸುತ್ತದೆಯಂತೆ.

Image result for sarvajanika ralli vinanthi kannada movie

ಹೀರೋ ಅಂದಾಕ್ಷಣ ಅದಕ್ಕೆ ನೆಗೆಟಿವ್ ಶೇಡ್ ಇರಲೇ ಬಾರದೆಂಬಂಥಾ ನಿಯಮ ಚಾಲ್ತಿಯಲ್ಲಿದೆ. ಆದರೆ ಪ್ರತಿಯೊಂದರಲ್ಲಿಯೂ ಸಿದ್ಧಸೂತ್ರಗಳನ್ನು ಮೀರಿಕೊಂಡಿರೋ ಕೃಪಾ ಸಾಗರ್ ಎಲ್ಲರೂ ಹೆಬ್ಬೇರಿಸುವಂತೆ ಈ ಪಾತ್ರವನ್ನು ಕಟ್ಟಿ ಕೊಟ್ಟಿದ್ದಾರಂತೆ. ತಾನು ಇಂಥಾದ್ದೊಂದು ವಿಶಿಷ್ಟವಾದ ಪಾತ್ರದ ಮೂಲಕವೇ ನಾಯಕನಾಗಿ ಲಾಂಚ್ ಆಗುತ್ತಿರೋದರ ಬಗ್ಗೆ ಮದನ್ ರಾಜ್ ಅವರಿಗೆ ಖುಷಿಯಿದೆ. ಈ ಪಾತ್ರದ ಮೂಲಕವೇ ಮತ್ತಷ್ಟು ಹೊಸಾ ಅವಕಾಶಗಳು ಅವರನ್ನು ಅರಸಿ ಬರುವ ಲಕ್ಷಣಗಳೇ ಗಾಢವಾಗಿವೆ.

Image result for sarvajanika ralli vinanthi kannada movie

ಬ್ಯೂಟಿ ಕಾಜಲ್ ಅಗರ್ವಾಲ್ ಬರ್ತಡೇ ಗೆ ಸಿಕ್ಕ ಗಿಫ್ಟ್ ‘ರಣರಂಗಂ’!!

#sarvajanikarallivinanthikannadamovie #sarvajanikarallivinanthikannadamovieteaser #sarvajanikarallivinanthikannadamovietrailer #madanraj #amruthakl #krupasagar

 

Tags