ಸುದ್ದಿಗಳು

ಇದೇ ತಿಂಗಳ 21 ರಂದು ‘ಸಾರ್ವಜನಿಕರಲ್ಲಿ ವಿನಂತಿ’ ಸಿನಿಮಾ ಬೆಳ್ಳಿತೆರೆಗೆ

ಸುಮಾರು ದಿನಗಳಿಂದ ಪೋಸ್ಟರ್ ಮತ್ತು ಟೀಸರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.

ಹೌದು, ಈ ಚಿತ್ರವು ಇದೇ ತಿಂಗಳ 21 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇನ್ನು ಚಿತ್ರದ ಮತ್ತೊಂದು ವಿಶೇಷವೆಂದರೆ, ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಯಾವುದೇ ಕಟ್ಸ್ ಹಾಗೂ ಮ್ಯೂಟ್ ಮಾಡದೇ ಮೆಚ್ಚುಗೆಯ ಮಾತನಾಡಿದ್ದಾರೆ. ಅಲ್ಲದೇ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ.

ಇನ್ನು ಚಿತ್ರದ ಬಗ್ಗೆ ಚಿತ್ರತಂಡದವರು ಮಾತನಾಡಿದ್ದು, ‘ನಮ್ಮ ಸಿನಿಮಾ ಇದೇ ತಿಂಗಳ 21 ರಂದು ತೆರೆಗೆ ಬರುತ್ತಿದೆ. ದಯಮಾಡಿ ನೀವು ಬರುವುದರ ಜೊತೆಗೆ ನಿಮ್ಮವರನ್ನು ಕರೆದುಕೊಂಡು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಹೊಸ ತಂಡವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ’ ಎಂದಿದ್ದಾರೆ. ಹಾಗೆಯೇ ಚಿತ್ರದ ಹೊಸ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ಇದೊಂದು ಕ್ರೈಮ್ ರಿಲೇಟೆಡ್ ಕಥಾಹಂದರವನ್ನು ಒಳಗೊಂಡಿದ್ದು, ಸಮಾಜದಲ್ಲಿ ಹೆಚ್ಚುತ್ತಿರುವ ಕ್ರೈಮ್ ಗಳ ಕುರಿತಾದ ಈ ಸಿನಿಮಾದಲ್ಲಿ ಸಾರ್ವಜನಿಕರಿಗೆ ಯಾವ ರೀತಿ ಮನವಿ ಮಾಡಲಾಗುತ್ತದೆ, ಕ್ರೈಮ್ ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಚಿತ್ರದ ತಿರುಳು.

ಕೃಪಾಸಾಗರ್ ಟಿ. ಎನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಉಮಾನಂಜುಂಡ ರಾವ್ ಹಾಗೂ ಕೃಪಾಸಾಗರ್ ಟಿ. ಎನ್ ನಿರ್ಮಿಸುತ್ತಿದ್ದು, ಅನಿಲ್ ಸಿ.ಜೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಚಿತ್ರಕ್ಕೆ ನಾಯಕನಾಗಿ ಮದನರಾಜ್, ನಾಯಕಿಯಾಗಿ ಅಮೃತಾ ಕೆ.ಎಲ್, ಮಂಡ್ಯ ರಮೇಶ್, ರಮೇಶ್ ಪಂಡಿತ್, ನಾಗೇಶ್ ಮಯ್ಯಾ, ಜ್ಯೋತಿ ಮರೂರು, ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಂತು ಸ್ಯಾಂಡಲ್ ವುಡ್ ತಾರೆಯರ ಶುಭಾಷಯಗಳು

#sarvajanikarallivinanthi, #realsed, #date, #annouced, #balkaninews #filmnews, #kannadasuddigalu

Tags