ಸುದ್ದಿಗಳು

ಸತೀಶ್ ನೀನಾಸಂಗೆ ಸಾಥ್ ನೀಡಲು ಮುಂದಾದ ದತ್ತಣ್ಣ

ಬೆಂಗಳೂರು, ಏ.15:

‘ಚಂಬಲ್’ ಎಂಬ ಹಿಟ್ ಸಿನಿಮಾದ ನಂತರ ಇದೀಗ ನೀನಾಸಂ ಸತೀಶ್ ಅವರು ಬ್ರಹ್ಮಚಾರಿಯಾಗಿರುವ ವಿಷಯ ಸಿನಿ ಪ್ರಿಯರಿಗೆಲ್ಲಾ ತಿಳಿದೇ ಇದೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು ಆ್ಯಕ್ಷನ್ ಪ್ರಿನ್ಸ್ ಎಂದೇ ಪ್ರಖ್ಯಾತರಾಗಿರುವ ಧ್ರುವ ಸರ್ಜಾ ಚಿತ್ರಕ್ಕೆ ಚಾಲನೆ ನೀಡಿದ್ದರು. ಮಾತ್ರವಲ್ಲ ಚಿತ್ರತಂಡಕ್ಕೆ ತಮ್ಮ ಶುಭಾಶಯಗಳನ್ನು ಸಹ ಕೋರಿದ್ದರು.

ರೊಮ್ಯಾಂಟಿಕ್ ಕಾಮಿಡಿಯಿಂದ ಕೂಡಿರುವ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದೆ. ಬ್ರಹ್ಮಚಾರಿ ಟೈಟಲ್ ಜೊತೆಗೆ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಕೂಡಾ ಇದ್ದು ಅದು ಸಿನಿ ಪ್ರಿಯರ ಮನ ಸೆಳೆಯುತ್ತಿದೆ.

ಚಿತ್ರದಲ್ಲಿ ನೀನಾಸಂ ಸತೀಶ್ ಅವರು ನಾಯಕನಾಗಿ ನಟಿಸಿದ್ದು ನಾಯಕಿಯಾಗಿ ಅದಿತಿ ಬಣ್ಣ ಹಚ್ಚಿದ್ದಾರೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಬ್ರಹ್ಮಚಾರಿ ಚಿತ್ರದಲ್ಲಿ ಹಿರಿಯ ಕಲಾವಿದ ದತ್ತಣ್ಣ ನಟಿಸಲಿದ್ದಾರೆ. ಬಹಳಷ್ಟು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ದತ್ತಣ್ಣ ಈಗ’ ಬ್ರಹ್ಮಚಾರಿ’ ಗೆ ಜೊತೆಯಾಗಿದ್ದಾರೆ. ಆದರೆ ‌  ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಇನ್ನೂ ಕೆಲದಿನಗಳು ಕಾಯಲೇಬೇಕು.

Image may contain: 11 people, people smilingImage may contain: 2 people, people smiling, people standing

‘ಸಾಹೋ’ ಚಿತ್ರದ ರೊಮ್ಯಾನ್ಸ್ ಸೀನ್ ಲೀಕ್!!!

#balkaninews #sandalwood #kannadamovies #sathishninasam #adithiprabhudeva #sathishninasamandadithiprabhudeva #dattanna

Tags