ಸುದ್ದಿಗಳು

ನನ್ನ ಬದುಕಿನ ಈ ಎಲ್ಲಾ ಸನ್ಮಾನಗಳು ನಿಮಗೆ ಎಂದ ಸತೀಶ್

ಬೆಂಗಳೂರು, ಏ.16:

ಸತೀಸ್ ನೀನಾಸಂ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ. ‘ಚಂಬಲ್’ ಸಿನಿಮಾ ಯಶಸ್ವಿ ಬೆನ್ನಲ್ಲೇ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಳ್ಳೆ ಒಳ್ಳೆಯ ಕಥೆಗಳಲ್ಲಿ  ನಟಿಸುತ್ತಿರುವ ಈ ನಟನಿಗೆ ಸದ್ಯ ಲಕ್ ತಿರುಗಿದೆ ಅಂದರೆ ತಪ್ಪಾಗಲ್ಲ. ಸದ್ಯ ಬ್ರಹ್ಮಚಾರಿ ಸಿನಿಮಾದಲ್ಲಿ ನಟಿಸುತ್ತಿರುವ ಈ ನಟ ತಮ್ಮ ತಾಯಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಮ್ಮನ ಜೊತೆ ಸತೀಶ್

ಹೌದು, ದೊಡ್ಡದೊಂದು ಹೂವಿನ ಹಾರ ಹಾಕಿ ತಾಯಿಗೆ ನಮಸ್ಕರಿಸಿರುವ ನಟ ನೀನಾಸಂ ಸತೀಶ್, ಎಲ್ಲಾ ಸನ್ಮಾನಗಳು, ನಿನಗೆ ನಿನ್ನಿಂದಲೇ ಅಂತಾ ತಾಯಿ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಬ್ರಹ್ಮಚಾರಿ’ ಸಿನಿಮಾದಲ್ಲಿ ಬ್ಯುಸಿ

ಸದ್ಯ ಬ್ರಹ್ಮಚಾರಿ ಚಿತ್ರದ ಮುಹೂರ್ತ ಕಾರ್ಯ ಮುಗಿದಿದೆ. ನಟ ನೀನಾಸಂ ಸತೀಶ್ ಗೆ ನಟಿ ಅಧಿತಿ ಪ್ರಭುದೇವ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಉಳಿದಂತೆ ಈ ಸಿನಿಮಾಗೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು,  ಚಂದ್ರ ಮೋಹನ್ ನಿರ್ದೇಶನ ಮಾಡಲಿದ್ದಾರೆ.

 

View this post on Instagram

 

ಎಲ್ಲಾ ಸನ್ಮಾನಗಳು ನಿನಗೆ ನಿನ್ನಿಂದಲೇ 😍😍😍😍 ಶುಭರಾತ್ರಿ..

A post shared by Sathish Ninasam (@sathish_ninasam_official) on

ವಿವಾಹದ ಸಂಭ್ರಮದಲ್ಲಿರುವ ‘ಕೆಜಿಎಫ್’ ಚಿತ್ರದ ವಿಲನ್

#balkaninews #sandalwood #sathishninasam #sathishninasammovies #sathishninasamfacebook

Tags

Related Articles