ಸುದ್ದಿಗಳು

ಗದಗ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಸತೀಶ್ ನೀನಾಸಂ

ಎಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ. ಅನೇಕರು ಮನೆಗಳನ್ನು ಕಳೆದು ಬೀದಿಗೆ ಬಂದಿದ್ದಾರೆ. ಈಗಾಗಲೇ ಸಾಮಾನ್ಯರು ಸೇರಿದಂತೆ ಕಲಾವಿದರು ಮತ್ತು ತಂತ್ರಜ್ಞರು ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದೀಗ ನಟ ಸತೀಶ್ ನೀನಾಸಂ ಅವರೂ ಸಹ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಅವರು ಗದಗ ಜಿಲ್ಲೆಯಲ್ಲಿನ ಕೆಲವು ಊರುಗಳಿಗೆ ಭೇಟಿ ಕೊಟ್ಟು, ಸಂತ್ರಸ್ತರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದಾರೆ. ಬಳಿಕ ಪರಿಹಾರ ಸಾಮಗ್ರಿ ವಿತರಿಸಿದ್ದಾರೆ.

ಅಂದ ಹಾಗೆ ಗದಗ ಜಿಲ್ಲೆಯಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಹಲವು ಗ್ರಾಮಗಳು ಮುಳುಗಡೆಯಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಲ್ಲಿನ ಜನರು ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಆಶ್ರಯ ಸ್ಥಳಕ್ಕೆ ಬಂದ ಸತೀಶ್ ರವರು ಪರಿಹಾರ ಸಾಮಗ್ರಿ ವಿತರಿಸಿದ್ದಾರೆ. ಬಳಿಕ ವೀರೇಶ್ವರ ಪುಣ್ಯಾಶ್ರಮದ ಪುಟ್ಟಯ್ಯಜ್ಜನವರ ಗದ್ದುಗೆ ದರ್ಶನ ಪಡೆದು, ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಗೆಳೆಯನ ನೆನಪಲ್ಲಿ ಸ್ಟಾರ್ ನಟನ ಮಗಳು..!!??!!

#sathish Ninasam #FloodVictimsPeoples #savenorthkarnataka

Tags