ಸುದ್ದಿಗಳು

‘ವಿರಾಮದ ನಂತರ ಮತ್ತೆ ಆರಂಭ’ ಎಂದ ನಟ ಸತೀಶ್

ಬೆಂಗಳೂರು, ಮಾ.16:

ನೀನಾಸಂ ಸತೀಶ್ ಸದ್ಯ ‘ಚಂಬಲ್’ ಸಿನಿಮಾ ಯಶಸ್ವಿಯಲ್ಲಿದ್ದಾರೆ. ಈಗಾಗಲೇ ‘ಚಂಬಲ್’ ಸಿನಿಮಾ ದೇಶ ವಿದೇಶಗಳಲ್ಲೂ ಅದ್ದೂರಿಯಾಗಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಯಶಸ್ವಿ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾದ್ರಾ ಸತೀಶ್..?

ಸಿನಿಮಾ ಮಂದಿಯೇ ಹಾಗೆ.. ಅದರಲ್ಲೂ ಸ್ಟಾರ್ ನಟರಂತೂ ಒಂದು ಸಿನಿಮಾ ಮುಗಿಯುವ ವೇಳೆಗೆ ಮತ್ತೋಂದು ಸಿನಿಮಾ ತಯಾರಿ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವೊಬ್ಬರು ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡೇ ಓಡಾಡುತ್ತಾರೆ. ಇದೀಗ ನಟ ನೀನಾಸಂ ಸತೀಶ್ ಕೂಡ ‘ಚಂಬಲ್’ ನಂತರ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ.

ವಿಡಿಯೋ ಮೂಲಕ ಹೇಳಿದ ನಟ

ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿರುವ ನೀನಾಸಂ ಸತೀಶ್, ವಿರಾಮದ ನಂತರ ಮತ್ತೆ ಆರಂಭ, ಹೊಸ ಕಲಿಕೆ, ಭರವಸೆ ನೀಡುತ್ತೇನೆ. ಹೊಸತನದೊಂದಿಗೆ ಹೊಸ ಸಾಹಸಗಳೊಂದಿಗೆ ಅತಿ ಶೀಘ್ರದಲ್ಲಿ ಬರುವೆ, ಪಕ್ಕಾ ಕಮರ್ಷಿಯಲ್ ಅಲ್ಲಿಯವರೆಗೂ ನಿಮ್ಮ ಹಾರೈಕೆ ಹೀಗೆ ಇರಲಿ ಎನ್ನುವ ಮೂಲಕ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಯಾವ ಸಿನಿಮಾ ಮುಂದಿನ ಯೋಜನೆ ಏನು ಅನ್ನೋದು ಮಾತ್ರ ಹೇಳಿಲ್ಲ.

ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯ ಕಥೆಯನ್ನು ಹೇಳಲಿರುವ ರಾಕೇಶ್

#balkaninews #sathishninasam #sathishninasammovies #sandalwood #kannadamovies

Tags