ಸುದ್ದಿಗಳು

ಬ್ರಹ್ಮಚಾರಿಣಿ ಅದಿತಿಯೊಂದಿಗೆ ಜೊತೆಗೆ ‘ಶಾನೆ ಟಾಪಾಗವ್ಳೇ..’ ಎಂದು ಟಿಕ್ ಟಾಕ್ ಮಾಡಿದ ನೀನಾಸಂ ಸತೀಶ್

‘ಬ್ರಹ್ಮಚಾರಿ’ ಚಿತ್ರದ ನಾಯಕ-ನಾಯಕಿಯ ಟಿಕ್ ಟಾಕ್

ಬೆಂಗಳೂರು.ಏ.20: ನಟ ನೀನಾಸಂ ಸತೀಶ್ ಇದೀಗ ‘ಬ್ರಹ್ಮಚಾರಿ’ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದೀಗ ಅದೇ ಚಿತ್ರದ ನಾಯಕಿ ಅದಿತಿ ಪ್ರಭುದೇವರೊಂದಿಗೆ ‘ಶಾನೆ ಟಾಪಾಗವ್ಳೇ.. ನಮ್ ಹುಡುಗಿ’ ಎಂದು ಟಿಕ್ ಟಾಕ್ ಮಾಡಿದ್ದಾರೆ.

‘ಇತ್ತಿಚೆಗೆ ನನ್ನ ಫೇವರೇಟ್ ನಾನು ಗುನುಗುವ ಹಾಡು, ಬ್ರಹ್ಮಚಾರಿಣಿಯ ಜೊತೆಗೆ ಟಿಕ್ ಟಾಕ್ ಹಾಡು’ ಎಂದು ಹೇಳಿಕೊಂಡ ಸತೀಶ್, ತಮ್ಮ ಚಿತ್ರದ ನಾಯಕಿಯೊಂದಿಗೇ ಟಿಕ್ ಟಾಕ್ ವಿಡಿಯೋ ಮಾಡಿ, ಅದನ್ನು ಪೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.

ಅಂದ ಹಾಗೆ ‘ಶಾನೆ ಟಾಪಾಗವ್ಳೇ..’ ಎಂಬ ಹಾಡು ‘ಸಿಂಗ’ ಚಿತ್ರದ್ದು. ಈ ಚಿತ್ರದಲ್ಲಿ ಚಿರು ಸರ್ಜಾ ನಾಯಕನಟರಾಗಿದ್ದರೆ, ಬ್ರಹ್ಮಚಾರಿಣಿ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಹಳ್ಳಿ ಹುಡುಗಿ ಗೆಟೆಪ್ ನಲ್ಲಿ ಮಿಂಚಿದ್ದರೆ, ‘ಬ್ರಹ್ಮಚಾರಿ’ಯಲ್ಲಿ ಬ್ರಹ್ಮಚಾರಿಣಿಯಾಗಲಿದ್ದಾರೆ. ವಿಶೇಷವೆಂದರೆ, ಈ ಎರಡು ಚಿತ್ರಗಳನ್ನೂ ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ಇದೀಗ ‘ಬ್ರಹ್ಮಚಾರಿ’ಯ ಸಂಗ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸತೀಶ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಗ್ರಂಥಾಲಯವೊಂದರ ಗ್ರಂಥಪಾಲಕಿಯಾಗಿ ನಟಿಸುತ್ತಿದ್ದಾರೆ.

ಇನ್ನು ಹೆಸರೇ ಹೇಳುವಂತೆ ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಹಾಸ್ಯದೊಂದಿಗೆ ಭಾವನಾತ್ಮಕ ಅಂಶಗಳು, ಕಲರ್ ಫುಲ್ ಹಾಡುಗಳು ಮತ್ತು ಭರ್ಜರಿ ಆ್ಯಕ್ಷನ್ ಕೂಡಾ ಇರಲಿದೆ. ಹಾಗೆಯೇ ಚಿತ್ರದ ಕಥೆ ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ಸಾಗಲಿದೆ.

‘ನಾರಾಯಣ’ನ ಅವತಾರದ ನಂತರ ‘ಪುಣ್ಯಕೋಟಿ’ಯಾಗಲು ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

#sathishninasam, #tiktok, #video, #balkaninews #filmnews, #kannadasuddigalu, #aditiprabhudeva

Tags