ಸುದ್ದಿಗಳು

ಮತ್ತೆ ದ್ವಿಭಾಷೆ ಸಿನಿಮಾದಲ್ಲಿ ಸಾತ್ವಿಕಾ ಅಪ್ಪಯ್ಯ

‘ಲೈಫು ಸೂಪರ್’ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಕಾಲಿಟ್ಟು ಭರವಸೆಯ ನಾಯಕಿಯಾಗಿ ಗುರುತಿಸಿಕೊಂಡವರು ಸಾತ್ವಿಕಾ ಅಪ್ಪಯ್ಯ. ಈ ಚಿತ್ರದ ಬಳಿಕ ಅವರು ‘ಸರ್ವಸ್ವ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ತೆಲುಗು ಭಾಷೆಗೆ ಡಬ್ಆಗಿತ್ತು.

ಅಂದ ಹಾಗೆ ಸಾತ್ವಿಕಾ ಇದೀಗ ‘ಐ 7’ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರವೂ ಸಹ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವುದು. ಹೀಗಾಗಿ ಮತ್ತೊಮ್ಮೆ ಅವರು ದ್ವಿಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಚಿತ್ರವನ್ನು ಹೈದರಾಬಾದ್ ಮೂಲದ ನವೀನ್ ಕುಮಾರ್ ನಿರ್ದೇಶನದೊಂದಿಗೆ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಈ ಚಿತ್ರದ ಮೂಲಕ ನಾನು ಪೂರ್ಣ ಪ್ರಮಾಣದಲ್ಲಿ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇಲ್ಲಿ ನನ್ನದು ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರವಾಗಿದ್ದು, ಸೈನ್ಸ್ ಪಿಕ್ಷನ್ ಮಾದರಿಯಲ್ಲಿ ಸಿನಿಮಾ ಮೂಡಿ ಬರಲಿದೆ’ ಎನ್ನುತ್ತಾರೆ ಸಾತ್ವಿಕಾ.

ಸದ್ಯ ‘ಸಿ 12’ ಎಂಬ ಚಿತ್ರದಲ್ಲಿ ಸಾತ್ವಿಕಾ ಇಲ್ಲಿ ಐಟಿ ಹುಡುಗಿಯಾಗಿ ನಟಿಸುತ್ತಿದ್ದು, ಅವರೊಂದಿಗೆ ದೊಡ್ಡ ಕಲಾವಿದರ ದಂಡೇ ಇಲ್ಲಿದೆ. ಮನೋಜ್ ನಿರ್ದೇಶನವಿರುವ ಈ ಚಿತ್ರವು ಸಂಜೆ 7 ಗಂಟೆಯಿಂದ ಬೆಳಗಿನಜಾವ 4 ಗಂಟೆವರೆಗೆ ನಡೆಯುವ ಒಂದು ಮರ್ಡರ್ ಮಿಸ್ಟ್ರೀ ಕಥೆಯನ್ನು ಒಳಗೊಂಡಿದೆ.

ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

#sathvikaappaiah #acted #kannada #and #telugu #movie #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags