ಸುದ್ದಿಗಳು

‘ಸವರ್ಣ ದೀರ್ಘ ಸಂಧಿ’ಯಲ್ಲಿ ಹಾಡುಗಳ ಹಬ್ಬ!

ಪ್ರತೀ ಸಿನಿಮಾಗಳು ಅನೌನ್ಸ್ ಆದಾಗಲೂ ಚೆಂದದ ಹಾಡುಗಳ ನಿರೀಕ್ಷೆಯಿಂದ ಕಾದು ಕೂರುವವರ ಸಂಖ್ಯೆ ಕನ್ನಡದಲ್ಲಿ ದೊಡ್ಡದಿದೆ. ಅದನ್ನು ಅನೇಕ ಚಿತ್ರಗಳು ಮತ್ತು ಸಂಗೀತ ನಿರ್ದೇಶಕರು ದಾಖಲಾರ್ಹವಾಗಿಯೇ ತಣಿಸಿದ್ದಾರೆ. ಅಂಥವರ ಸಾಲಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಹೆಸರು ನಿಜಕ್ಕೂ ಮುಂಚೂಣಿಯಲ್ಲಿದೆ.

ಯೋಗರಾಜ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರದ ಹಾಡುಗಳ ಮೂಲಕ ಮನೋಮೂರ್ತಿಯವರು ಮಾಡಿದ್ದ ಮನಮೋಹಕ ಹಾಡುಗಳ ಮೂಡಿಯನ್ನು ಕನ್ನಡ ಸಿನಿಮಾ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರೀಗ ಒಂದಷ್ಟು ಗ್ಯಾಪಿನ ನಂತರ ‘ಸವರ್ಣ ದೀರ್ಘ ಸಂಧಿ’ ಎಂಬ ಚಿತ್ರದ ಮೂಲಕ ಮರಳಿ ಬಂದಿದ್ದಾರೆ.ಮನೋಮೂರ್ತಿ ಯಾವ ಚಿತ್ರವನ್ನೇ ಒಪ್ಪಿಕೊಂಡರೂ ಜನರ ಮನಸಲ್ಲಿ ಮತ್ತೆ ಮುಂಗಾರು ಮಳೆಯಂಥಾ ಮೋಡಿ ಮಾಡಲೆಂಬ ಆಶಯ ಇರುತ್ತದೆ. ಅವರು ‘ಸವರ್ಣ ದೀರ್ಘ ಸಂಧಿ’ ಚಿತ್ರಕ್ಕೆ ಸಂಗೀತ ನಿರ್ದೇಶಕರೆಂಬ ವಿಚಾರ ಜಾಹೀರಾದಾಗಲೂ ಕೂಡಾ ಅಂಥಾದ್ದೇ ಆಶಯ ಎಲ್ಲರಲ್ಲಿಯೂ ಇತ್ತು.

ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳು ಅನಾವರಣಗೊಂಡಿವೆ. ಅದನ್ನು ಕೇಳಿದ ಪ್ರತಿಯೊಬ್ಬರೂ ಥ್ರಿಲ್ ಆಗಿದ್ದಾರೆ. ಮನೋಮೂರ್ತಿ ಕಡೆಗೂ ಮುಂಗಾರುಮಳೆಯಂಥಾದ್ದೇ ಮೋಡಿ ಮಾಡಿದ್ದಾರೆಂದು ಹಿರಿ ಹಿರಿ ಹಿಗ್ಗಲಾರಂಭಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ವೀರೇಂದ್ರ ಶೆಟ್ಟಿ ಬರೆದ ಕೊಳಲಾದೆ ನಾ ಎಂಬ ಹಾಡೂ ಸೇರಿದಂತೆ ಎಲ್ಲ ಹಾಡುಗಳೂ ಮೂಡಿ ಬಂದಿರೋ ರೀತಿಯೇ ಅಂಥಾದ್ದಿದೆ.ಮುಂಗಾರುಮಳೆ ಚಿತ್ರ ಅನೌನ್ಸ್ ಆದಾಗ ಅದು ಆ ಪಾಟಿ ಹಿಟ್ ಆಗುತ್ತದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಲ್ಲ. ಅದರಲ್ಲಿ ಮೊದಲ ಸಲ ಆ ಚಿತ್ರದ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದ್ದೇ ಮುದ್ದಾದ ಹಾಡುಗಳ ಮೂಲಕ.

‘ಸವರ್ಣ ದೀರ್ಘ ಸಂಧಿ’ಯ ವಿಚಾರದಲ್ಲಿಯೂ ಅಂಥಾದ್ದೇ ಮೋಡಿ ಮನೋಮೂರ್ತಿ ಕಡೆಯಿಂದ ನಡೆದಿದೆ. . ಲೂಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶೆಟ್ಟಿ ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವೀಗ ಹಾಡುಗಳ ಕಾರಣದಿಂದಲೇ ಬಿಡುಗಡೆಯ ಹೊಸ್ತಿಲಲ್ಲಿ ಸುದ್ದಿ ಕೇಂದ್ರದಲ್ಲಿದೆ.

ನಿಶ್ಚಿತಾರ್ಥ ಮಾಡಿಕೊಂಡ ‘ರಾಧಾ ಕಲ್ಯಾಣ’ ಸೀರಿಯಲ್ ರಾಧೆ !

 

Tags