ಸುದ್ದಿಗಳು

ಧರ್ಮಪತ್ನಿಯ ಜನ್ಮದಿನಕ್ಕೆ ವಿಶೇಷವಾಗಿ ಶುಭಕೋರಿದ ಆರ್ಯ

ಮುಂಬೈ ಮೂಲದ ಸಯ್ಯೇಶಾ ಸೆಹಗಲ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ಬಳಿಕ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ನಟಿ ಸಯ್ಯೇಶಾರವರಿಗೆ ಇಂದು ಜನ್ಮದಿನದ ಸಂಭ್ರಮ.

ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿ ಸಯ್ಯೇಶಾ ತಮಿಳು ಚಿತ್ರರಂಗದ ಜನಪ್ರಿಯ ನಟ ಆರ್ಯರವರನ್ನು ಕುಟುಂಬದವರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ಕೈಹಿಡಿದರು.

Image result for sayesha saigal and arya

ಇದೀಗ ಸಂತೋಷದಿಂದ ಸಂಸಾರ ನಡೆಸುತ್ತಿರುವ ಸಯ್ಯೇಶಾರವರಿಗೆ ಇದು ಮದುವೆಯ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬವಾಗಿದೆ. ಇಂದು ಹುಟ್ಟುಹಬ್ಬದ ವಿಶೇಷವಾಗಿ ಆರ್ಯ, ಪತ್ನಿಯ ಜೊತೆಗಿರುವ ಫೋಟೊವನ್ನು ಶೇರ್ ಮಾಡುವುದರ ಜೊತೆಗೆ “ಹ್ಯಾಪಿ ಬರ್ತಡೇ ವೈಫಿ” ಎನ್ನುವ ಟ್ಯಾಗ್ ಲೈನ್ ನೀಡಿದ್ದಾರೆ.ವಿಶೇಷವೆಂದರೇ, ಆರ್ಯ ಹಾಗೂ ಸಯ್ಯೇಶಾ ಕಳೆದ ವರ್ಷ ‘ಗಜಿನಿಕಾಂತ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.. ಅಲ್ಲಿಂದ ಇವರಿಬ್ಬರ ಪ್ರೇಮ ಶುರುವಾಯಿತು. ಸಯ್ಯೇಶಾಗಿಂತ 17 ವರ್ಷದ ಹಿರಿಯ ನಟರಾಗಿರುವ ಆರ್ಯರವರ ಜೊತೆ  ಹೈದರಾಬಾದ್ ನಲ್ಲಿ ಸಪ್ತಪದಿ ತುಳಿದಿದ್ದರು.

Image result for sayesha saigal and arya

ಸದ್ಯ ಸಯ್ಯೇಶಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಜೊತೆ ‘ಯುವರತ್ನ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಇಂತಿಪ್ಪ ಮುದ್ದು ಸುಂದರಿ ಸಯ್ಯೇಶಾರವರಿಗೆ ನಮ್ಮ ಬಾಲ್ಕನಿ ನ್ಯೂಸ್ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತೇವೆ.

‘2 ಎಕ್ರೆ’ಯಲ್ಲಿ ಸಣ್ಣ ಪಾಲು ಪಡೆದ ‘ಶೃಂಗಾರದ ಹೂವು’ ಸೋನಲ್

#balkaninews #kollywood #arya #sayeshasaigal #sayeshasaigalinstagram #sayeshasaigaltwitter #sayeshasaigalwedding #sayeshasaigalbirthday #aryaandsayeshasaigal #aryatwitter

Tags