ಸುದ್ದಿಗಳು

‘ಮುನಿರತ್ನ ಕುರುಕ್ಷೇತ್ರ’ ನೋಡಲು ಹರಿದು ಬಂತು ಮಕ್ಕಳ ಸೈನ್ಯ

ಡಿ-ಬಾಸ್ ದರ್ಶನ್ ಅಭಿನಯದ 50 ನೇ ಸಿನಿಮಾ ‘ಕುರುಕ್ಷೇತ್ರ’ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಸೃಷ್ಟಿಸುತ್ತಿದೆ. ಮಹಾಭಾರತ ಕಥೆಯನ್ನು ಸಿನಿಮಾ ಮೂಲಕ ತೆರೆಯ ಮೇಲೆ ತಂದು ಇಂದಿನ ಯುವಪೀಳಿಗೆಯ ಮುಂದಿಟ್ಟಿರುವ ನಿರ್ಮಾಪಕ ಮುನಿರತ್ನ ಪ್ರಯತ್ನಕ್ಕೆ ಅಭಿಮಾನಿಗಳು ಭೇಷ ಎಂದಿದ್ದಾರೆ.

ಬರೀ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆ ಕಂಡಿರುವ ಈ ಚಿತ್ರವು ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗಿದೆ. ವಿಶೇಷವೆಂದರೆ, ಈ ಚಿತ್ರವನ್ನು ನೋಡಲು ಇದೀಗ ಮಕ್ಕಳ ಸೈನ್ಯವೇ ಬಂದಿದೆ. ಚಿತ್ರಮಂದಿರ ತುಂಬ ಮಕ್ಕಳೇ ತುಂಬಿಕೊಂಡಿದ್ದಾರೆ.

ಮಕ್ಕಳು ಸಿನಿಮಾ ನೋಡುವುದಕ್ಕೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಈ ಪೌರಾಣಿಕ ಸಿನಿಮಾವನ್ನು ವಿಶೇಷವಾಗಿ ಮಕ್ಕಳಿಗೆ ತೋರಿಸಲಾಗುತ್ತಿದೆ. ಕಥೆಯನ್ನು ಮಾತ್ರ ಕೇಳುತ್ತಿದ್ದ ಮಕ್ಕಳೀಗ ಮಹಾಭಾರತವನ್ನು ತೆರೆ ನೋಡಿ ಸಂತಸ ಪಡುತ್ತಿದ್ದಾರೆ.

ಅಂದ ಹಾಗೆ ಕಳೆದ ಭಾನುವಾರ ಏರ್ಪಾಡಿಗಿದ್ದ ಸೆಲೆಬ್ರಿಟಿ ಶೋ ಕಾರ್ಯಕ್ರಮದಲ್ಲಿ ನಿರ್ಮಾಪಕ ಮುನಿರತ್ನರವರು ಈ ಚಿತ್ರವನ್ನು ಮಕ್ಕಳಿಗೆ ತೋರಿಸಲು ಟ್ಯಾಕ್ಸ್ ಫ್ರೀ ನೀಡಿ ಎಂದು ಸಿಎಂ ಯಡಿಯೂರಪ್ಪನವರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಅವರು ಮಕ್ಕಳಿಗೆ ಸಿನಿಮಾ ತೋರಿಸಲಾಗುತ್ತಿದ್ದಾರೆ.

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ: ಕನ್ನಡದ ತೆರೆಯ ಮೇಲೆ ವಿವಿಧ ರೀತಿಯ ಕೃಷ್ಣ

#schoolStudents #kurukshetraMovie #kannadafilm, #kannadamovie, #kannadanews

Tags