ಸುದ್ದಿಗಳು

‘ಜಮಾಲ್ ಖಾಶಾಗ್ಗಿ’ ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡಲಿರುವ ಸೀನ್ ಪೆನ್

ಆಸ್ಕರ್ ವಿಜೇತ ನಟ ಸೀನ್ ಪೆನ್

ಬೆಂಗಳೂರು, ಡಿ.07: ಆಸ್ಕರ್ ವಿಜೇತ ನಟ ಮತ್ತು ಚಿತ್ರನಿರ್ಮಾಪಕ ಸೀನ್ ಪೆನ್ ಅವರು ಇತ್ತೀಚೆಗೆ ಇಸ್ತಾಂಬುಲ್‍ ನಲ್ಲಿ ಸೌದಿ ಅರೇಬಿಯಾದ ದೂತಾವಾಸದ ಹೊರಗೆ ಪತ್ತೆಯಾದ ಪತ್ರಕರ್ತ ಜಮಾಲ್ ಖಾಶಾಗ್ಗಿನ ಕೊಲೆಯನ್ನು ಆಧರಿಸಿದ ಸಾಕ್ಷ್ಯಚಿತ್ರವೊಂದನ್ನು ಚಿತ್ರೀಕರಣ ಮಾಡುತ್ತಿದ್ದಾರೆ.

58ರ ಹರೆಯದ ಪತ್ರಕರ್ತ ಸೇರಿದಂತೆ 10 ಬಾಡಿಗಾರ್ಡ್ ಸಿಬ್ಬಂದಿಯೂ ಕೊಲೆಯಾಗಿದ್ದರು ಎಂದು ಅಲ್ ಜಜೀರಾ ವರದಿ ಮಾಡಿತ್ತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಖಾಶಾಗ್ಗಿಯವರು ತನ್ನ ಪ್ರೇಯಸಿ ಹ್ಯಾಟಿಸ್ ಸೆಂಜಿಸ್ ಮತ್ತು ಪತ್ರಕರ್ತನ ಆಪ್ತರೊಂದಿಗೆ ಕೂಡ ಪೆನ್ ಮಾತುಕತೆ ನಡೆಸಲಿದ್ದಾರೆ.ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಾಶಾಗ್ಗಿ ಕೊಲೆ ಪ್ರಕರಣದ ಸಾಕ್ಷ್ಯಾಚಿತ್ರ

ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಖಾಶಾಗ್ಗಿ ಅವರು ಸೌದಿ ಅರೇಬಿಯಾದ ರಾಜಕುಮಾರನ ವಿರುದ್ಧ ದನಿಯೆತ್ತಿದರು. ಇದಾದ ನಂತರ ಅಕ್ಟೋಬರ್ 2ರಿಂದ ಅವರು ಕಾಣೆಯಾಗಿದ್ದರು. ಟರ್ಕಿಯ ಇಸ್ತಾನ್ಬುಲ್‍ ನಲ್ಲಿ ಸೌದಿಯ ದೂತಾವಾಸಕ್ಕೆ ಪ್ರವೇಶಿಸಿದ ನಂತರ ದಾಖಲೆಗಳನ್ನು ಸಂಗ್ರಹಿಸಿ, ಕಾನ್ಸುಲೇಟ್ ಹೊರಗೆ ಕಾಯುತ್ತಿದ್ದ ಹ್ಯಾಟಿಸ್ ಸೆಂಜಿಜ್ ಜೊತೆಗೆ ವಿವಾಹವಾಗಲು ಅನುಮತಿ ನೀಡಿದರು. ಸೌದಿ ದೂತಾವಾಸದಿಂದ ಪುನಃ ಹೊರಬರಲು ಖಾಶಾಗ್ಗಿ ವಿಫಲವಾದ ಸಂದರ್ಭದಲ್ಲಿ ಸೆಂಜಿಜ್ ಎಚ್ಚರಿಕೆಯನ್ನು ನೀಡಿದ್ದರು.

ಅಕ್ಟೋಬರ್ 2ರ ಘಟನೆ ನಡೆದು ಕೆಲವು ವಾರಗಳ ನಂತರ, ಸೌದಿ ಅರೇಬಿಯಾದ 15 ಏಜೆಂಟ್‍ ಗಳ ಗುಂಪು ವಾಷಿಂಗ್ಟನ್ ಪೋಸ್ಟ್ನ ಮಾಜಿ ಪತ್ರಕರ್ತನ ಹತ್ಯೆಗೆ ಕಾರಣರಾಗಿರುವುದು ತಿಳಿದುಬಂದಿತು. ಇದು ಅಂತಾರಾಷ್ಟ್ರೀಯ ಮಟ್ಟದ ಕೋಲಾಹಲಕ್ಕೆ ಕಾರಣವಾಯಿತು.

ಖಾಶಾಗ್ಗಿಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಿಂಗ್ಡಮ್ ಅಧಿಕಾರಿಗಳನ್ನು ಬಂಧಿಸಲಾಯಿತು. ಅಲ್ಲದೇ, ಸೌದಿ ಏಜೆಂಟ್‍ ಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

Tags

Related Articles