ಬಾಲ್ಕನಿಯಿಂದಸುದ್ದಿಗಳು

ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ದೂರಿಯಾಗಿ ನಡೆಯಿತು ಸೀಮಂತ

ನೀವೆಲ್ಲರೂ ಸೀಮಂತ ಕಾರ್ಯಕ್ರಮ ಮನೆಯಲ್ಲಿ, ಹೋಟೆಲ್ ಹಾಲ್ ಗಳಲ್ಲಿ ನಡೆಯುವುದನ್ನು ನೋಡಿದ್ದೀರಿ. ಆದರೆ ಪೊಲೀಸ್ ಠಾಣೆಯಲ್ಲಿ ನಡೆಯುವುದನ್ನು ನೋಡಿದ್ದೀರಾ?.

ನೋಡಿಲ್ಲ, ಕೇಳಿಲ್ಲ ಅಂದರೆ ಈ ಸ್ಟೋರಿ ಓದಿ… ಹೌದು, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಹೋಮ್ ಗಾರ್ಡ್ ಸಿಬ್ಬಂದಿ ಆಗಿರುವ ತುಂಬು ಗರ್ಭಿಣಿ ಮಲ್ಲಿಕಾ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ.

ಮಲ್ಲಿಕಾ ಅವರನ್ನು ಪುತ್ತೂರು ಕೆಮ್ಮಾಯಿಯ ಕೇಶವರಿಗೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿ ಕಳೆದ ತಿಂಗಳೇ ಸೀಮಂತವಾಗಿತ್ತು. ಆದರೆ ವಿಟ್ಲ ಪೊಲೀಸರು ತುಂಬು ಗರ್ಭಿಣಿ ಮಲ್ಲಿಕಾರಿಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ.

ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಹಾಗೂ ಸಿಬ್ಬಂದಿಗಳು ಮಲ್ಲಿಕಾ ಅವರಿಗೆ ಅದ್ದೂರಿ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಮಹಿಳಾ ಪೊಲೀಸರು ಮಲ್ಲಿಕಾ ಅವರಿಗೆ ಹಣೆಗೆ ಕುಂಕುಮವಿಟ್ಟು ತಲೆಗೆ ಚೆಂಡು ಮಲ್ಲಿಗೆ ತೊಡಿಸಿದರು. ಹೂವು ಸೀರೆ ಕೊಟ್ಟು ಎಲೆ ಅಡಿಕೆಯನ್ನು ಕೈಗೆ ನೀಡಿ ಸಿಹಿ ಹಂಚಿದರು.

ಕಾಳಗಕ್ಕಿಳಿದ ಕಾಳಿಂಗ-ಹೆಬ್ಬಾವು: ಕೊನೆಗೆ ಆಗಿದ್ದೇನು?

#balkaninews #seemantha #policestation #vitla

Tags