ಸುದ್ದಿಗಳು

ಬರೋಬ್ಬರಿ ಐದುವರೇ ಕೋಟಿಗೆ ಮಾರಾಟವಾದ ‘ಸೀತಾರಾಮ ಕಲ್ಯಾಣ’ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು

ಆರ್.ಕೆ ದಗ್ಗಲ್ ಸ್ಟುಡಿಯೋ ಖರೀದಿಸಿದ ಹಿಂದಿ ಸ್ಯಾಟಲೈಟ್ ಹಕ್ಕು

ಬೆಂಗಳೂರು, ಸ.14: ಕನ್ನಡದ ಚಿತ್ರಗಳು ಹಿಂದಿ ಭಾಷೆಯಲ್ಲಿ ಡಬ್ ಆಗುತ್ತಿದೆ. ಅಲ್ಲಿನ ಸಂಸ್ಥೆಯವರು ನಮ್ಮ ಚಿತ್ರಗಳನ್ನು ಕೋಟಿ ಕೋಟಿ ರೂಪಾಯಿಯನ್ನು ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾಗುತ್ತಿವೆ.

ಹಿಂದಿ ಡಬ್ಬಿಂಗ್ ರೈಟ್ಸ್

ಕನ್ನಡದ ಚಿತ್ರಗಳಾದ ‘ತಾರಕಾಸುರ’,’ಬಜಾರ್’,’ಅಯೋಗ್ಯ’ ಚಿತ್ರಗಳು ಈಗಾಗಲೇ ಹಿಂದಿ ಭಾಷೆಯಲ್ಲಿ ಡಬ್ ಆಗಲು ಕೋಟಿಗಟ್ಟಲೇ ಹಣವನ್ನು ಪಡೆದಿವೆ. ಇದೀಗ ನಿಖಿಲ್ ಕುಮಾರ್ ಸ್ವಾಮಿ ಅಭಿನಯಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರವು ಬರೋಬ್ಬರಿ ಐದುವರೇ ಕೋಟಿ ರೂಪಾಯಿಯನ್ನು ಡಬ್ಬಿಂಗ್ ಗಾಗಿ ಪಡೆದುಕೊಂಡಿದೆ.

5.5 ಕೋಟಿ ರೂಪಾಯಿ

ಚೆನ್ನಾಂಬಿಕ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರವು ಕೌಟಂಭಿಕ ಮತ್ತು ಸಾಹಸಮಯ ಕಥಾಹಂದರವನ್ನು ಒಳಗೊಂಡಿದೆ. ಎ.ಹರ್ಷಾ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಹಿಂದಿ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 5.5 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಹಿಂದಿ ಆವೃತ್ತಿಯ ಸ್ಯಾಟಲೈಟ್ ರೈಟ್ಸ್ ಅನ್ನು ಆರ್ ಕೆ ದಗ್ಗಲ್ ಸ್ಟುಡಿಯೋ ಖರೀದಿಸಿದೆ.

ಚಿತ್ರದ ಬಗ್ಗೆ

ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಚಿತ್ರೀಕರಣ ಮುಕ್ತಾಯದ ಬಳಿಕ ಕೂಡಲೇ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಇನ್ನುಳಿದಂತೆ ಶರತ್ ಕುಮಾರ್, ಬಾಲಿವುಡ್ ನ ಮಾಧೂ, ರವಿಶಂಕರ್, ಚಿಕ್ಕಣ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Tags

Related Articles