ಸುದ್ದಿಗಳು

‘ಸೀತಾರಾಮ ಕಲ್ಯಾಣ’ ಸಿನಿಮಾಗೂ ಹಾಗೂ ಕಲಾವಿದರ ಸಂಬಂಧ

ರಚಿತಾ ರಾಮ್ ಮತ್ತು ನಿಖಿಲ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ

ಬೆಂಗಳೂರು, ನ.21: ಕರುನಾಡ ಯುವರಾಜ ನಿಖಿಲ್ ಕುಮಾರ್ ಹಾಗೂ ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಸೀತಾರಾಮ ಕಲ್ಯಾಣ’. ಈಗಾಗಲೇ ಟೀಸರ್ ಮೂಲಕ ಸೌಂಡ್ ಮಾಡಿರುವ ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಈ ಸಿನಿಮಾ ಚಿತ್ರೀಕರಣಕ್ಕೂ ಹಾಗೂ ಕಲಾವಿದರಿಗೂ ಒಂದು ಸಂಭಂಧವಿದೆ.

‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಕಂಪ್ಲೀಟ್

ಸ್ಯಾಂಡಲ್‌ ವುಡ್‌ ನಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಯಾಕಂದರೆ, ಚಿತ್ರ ಹುಟ್ಟುಹಾಕಿರುವ ನಿರೀಕ್ಷೆಗಳು, ಕುತೂಹಲಗಳು ಅಂತಹದ್ದು.  ಎ.ಹರ್ಷ ಅವರ ನಿರ್ದೇಶನ ಇರುವ ಈ ಸಿನಿಮಾ ಬಹುತಾರಾಗಣದಿಂದ ಕೂಡಿದೆ.ಟೀಸರ್‌ ನಲ್ಲಿ ಭಾರಿ ಕಮಾಲ್ ಮಾಡಿದ ‘ಸೀತಾರಾಮ ಕಲ್ಯಾಣ’

ಟೀಸರ್ ನೋಡಿ ಕಳೆದು ಹೋಗಿದ್ದ ಅಭಿಮಾನಿಗಳು, ಈ ಸಿನಿಮಾದ ಒಂದು ಸಾಂಗ್ ಕೂಡಾ ನೋಡಿ ಫುಲ್ ಖುಷಿಯಾಗಿದ್ದಾರೆ. ಕರುನಾಡ ಯುವರಾಜ ನಿಖಿಲ್ ಅವರ ನಟನೆಯ ಮೂರನೇ ಸಿನಿಮಾದ ಭರ್ಜರಿ ರೊಮ್ಯಾಂಟಿಕ್ ಸಾಂಗ್‌ ಅನ್ನು ಕಣ್ತುಂಬಿಕೊಂಡ ಅಭಿಮಾನಿಗಳಿಗೆ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿದೆ.  ‘ನಿನ್ನ ರಾಜ ನಾನು ನನ್ನ ರಾಣಿ ನೀನು’ ಅನ್ನುವ ಈ ಲಿರಿಕಲ್ ಹಾಡು ಕೇಳುಗರಿಗೆ ತುಂಬಾ ಖುಷಿಕೊಟ್ಟಿದೆ.

ಅದ್ದೂರಿಯಾದ ಕಾರ್ಯಕ್ರಮದಲ್ಲಿ ಭಾಗಿಯಾದ ಚಿತ್ರತಂಡ

ಮೊನ್ನೆಯಷ್ಟೇ ನಡೆದ ಅದ್ದೂರಿಯಾದ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು ಹಾಗೂ ಬಾಲಿವುಡ್‌ ನ ನಟ ನಟಿಯರು ಭಾಗಿಯಾಗಿದ್ದು, ಸಿನಿಮಾದ ಬಗ್ಗೆ ತಮ್ಮ ಅನುಭವವನ್ನು  ಹಂಚಿಕೊಂಡಿದ್ದಾರೆ. ಗಿರೀಜಾ ಲೊಕೇಶ್, ಶಿವರಾಜ್ ಕೆ.ಆರ್.ಪೇಟೆ, ಮಧುಬಾಲಾ, ಬಾಲಿವುಡ್ ನಟಿ ಭಾಗ್ಯಶ್ರೀ, ಶರತ್, ಆದಿತ್ಯ ಮೆನನ್, ಚಿಕ್ಕಣ್ಣ, ಜ್ಯೋತಿ ರೈ, ನಯನ, ಜೀವನ್, ವೀಣಾ ಪೊನ್ನಪ್ಪ, ರವಿ ಭಟ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.130 ಫ್ಲಸ್ 130

ಸದ್ಯ 130 ದಿನಗಳ ಕಾಲ ಚಿತ್ರೀಕರಣ ಮಾಡಿರುವ ಈ ಸಿನಿಮಾ ತಂಡ 130 ಕಲಾವಿದರನ್ನು ಒಳಗೊಂಡಿದೆ. ಒಂದೊಂದು ಪಾತ್ರ ಸೇರಿ ಒಟ್ಟು 130 ಪಾತ್ರದಾರಿಗಳು ಈ ಸಿನಿಮಾದಲ್ಲಿದ್ದಾರೆ. ವಿಶೇಷ ಅಂದರೆ  130 ಫ್ಲಸ್ 130 ಎನ್ನುವ ರೀತಿ ಇದೆ ಸಿನಿಮಾ ತಂಡದ ಲೆಕ್ಕಾಚಾರ.

ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಎ.ಹರ್ಷ

ಇನ್ನು ‘ಸೀತಾರಾಮ ಕಲ್ಯಾಣ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಿಖಿಲ್‌ ಕುಮಾರ್ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದು, ಚಿತ್ರ ಅದ್ಭುತವಾಗಿ ಮೂಡಿಬಂದಿದೆಯಂತೆ.. ಚಿತ್ರದಲ್ಲಿರೋ ರೊಮ್ಯಾಂಟಿಕ್ ಸಾಂಗ್‌ ನ್ನ ಮೂರು ದಿನಗಳ ಕಾಲ ಶೂಟ್ ಮಾಡಿದ್ದಾರಂತೆ.  ಬಹಳಷ್ಟು ಬ್ಯೂಟಿಫುಲ್ ಲೊಕೇಶನ್ಸ್‌ ನಲ್ಲಿ ಸಾಂಗ್ ಶೂಟ್ ಮಾಡಿರುವ ಚಿತ್ರತಂಡ, ಹಾಡಿಗಾಗಿ ಕಂಠೀರವ ಸ್ಟುಡಿಯೋದಲ್ಲಿ ಎರಡು ವಿಭಿನ್ನ ಸೆಟ್ ಹಾಕಿ ಚಿತ್ರೀಕರಣ ಮಾಡಿದೆಯಂತೆ..ಹಳ್ಳಿ ಬ್ಯಾಗ್ರೌಂಡ್‌ನಲ್ಲಿ  ‘ಸೀತಾರಾಮ ಕಲ್ಯಾಣ’

ಅಂದಹಾಗೆ ಈ ಸಿನಿಮಾಗಾಗಿ ಚಿತ್ರತಂಡ ಸುಮಾರು 130 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಚಿತ್ರೀಕರಣ ಫುಲ್ ಕಂಪ್ಲೀಟ್ ಮಾಡಿದೆ. ಜನವರಿಯಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಇನ್ನು ಈ ಚಿತ್ರದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ಚಿತ್ರ ತೆರೆ ಮೇಲೆ ಬರುವವರೆಗೂ ಕಾಯಲೇಬೇಕು.

 

Tags

Related Articles