ಸುದ್ದಿಗಳು

ಮಗನ ನಟನೆ ನೋಡಿ ಫಿದಾ ಆದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜ.11: ‘ಸೀತಾರಾಮ ಕಲ್ಯಾಣ’ ಸಿನಿಮಾ ಇದೇ 25ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೂ ದಿನಾಂಕ ನಿಗಧಿಯಾಗಿದ್ದು ಇದರ ಬೆನ್ನಲ್ಲೇ ಇದೀಗ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ ಚಿತ್ರತಂಡ

ನಿಖಿಲ್‌ ಕುಮಾರ್‌ ಗೆ ನಾಯಕಿಯಾಗಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಸ್ಕ್ರೀನ್‌ಶೇರ್ ಮಾಡಿದ್ದಾರೆ.. ಇದೊಂದು ಹಳ್ಳಿ ಬ್ಯಾಗ್ರೌಂಡ್‌ ನಲ್ಲಿ ನಡೆಯಲಿರೋ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಲವ್, ಫ್ಯಾಮಿಲಿ ಎಂಟರ್‌ಟೈನ್ ಹಾಗೂ ಆಕ್ಷನ್ ಸಿಕ್ವೇನ್ಸ್ ಇರಲಿದೆ. ಸದ್ಯ ಟೀಸರ್ ಮೂಲಕ ಬಹಳಷ್ಟು ಮೆಚ್ಚುಗೆ ಪಡೆದಿದ್ದ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದ ಒಂದೊಂದು ಹಾಡುಗಳು ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇದೀಗ ನಿನ್ನ ರಾಜ ನಾನು ನನ್ನ ರಾಣಿ ನೀನು ಹಾಡಿನ ರೀಮೇಕ್ ವಿಡಿಯೋ ಬಿಡುಗಡೆಯಾಗಿದೆ.ಹೇಗಿದೆ ಮೇಕಿಂಗ್ ವಿಡಿಯೋ

ನಿನ್ನ ರಾಜ ನಾನು ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಹಾಡು ಸಕ್ಕತ್ ಹಿಟ್ ಆಗಿತ್ತು. ಅಷ್ಟೆ ಅಲ್ಲ ಈ ಹಾಡು ಟ್ರೆಂಡಿಂಗ್ ನಲ್ಲೂ ಕೂಡ ಬಂತು. ಇದೀಗ ಈ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರೀಕರಣದ ಸಮಯದಲ್ಲಿ ನಿಖಿಲ್ ರವರ ಹುಡುಗಾಟ, ರಚಿತಾ ನಟನೆ, ಹರ್ಷ ತರಬೇತಿ ಹೀಗೆ ಎಲ್ಲವನ್ನು ತೋರಿಸಲಾಗಿದೆ. ಇನ್ನು ಮಗನ ಸಿನಿಮಾ ಪ್ರಾರಂಭವಾದಾಗಿನಿಂದಲೂ ಕೂಡ ಸಿಎಂ ಹಾಗೂ ಅನಿತಾ ಕುಮಾರಸ್ವಾಮಿ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಅದರಂತೆ ಭೇಟಿ ನೀಡಿದಾಗ ಚಿತ್ರೀಕರಣ ಹೇಗಿರುತ್ತಿತ್ತು ಎಂಬುದನ್ನು ಮೇಕಿಂಗ್ ನಲ್ಲಿ ತೋರಿಸಿದ್ದು, ಮಗನ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

#seetharamakalyanakannadamovie #kannadamovies #nikhilgowda #kumaraswamyandnikhilgowda #harshaa #balkaninews #makingvideo

Tags