ಸುದ್ದಿಗಳು

ಇದೇ 19 ರಂದು ಮೈಸೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ‘ಸೀತಾರಾಮ ಕಲ್ಯಾಣ’

ಮೈಸೂರು,ಜ.11: ನಿಖಿಲ್ ಕುಮಾರ್ ಅವರ ಎರಡನೆಯ ಚಿತ್ರವಾದ ‘ಸೀತಾರಾಮ ಕಲ್ಯಾಣ’ ಜನವರಿ 25 ರಂದು ಬಿಡುಗಡೆಗೆ ರೆಡಿಯಾಗಿದೆ… ಎ ಹರ್ಶ ನಿರ್ದೇಶಿಸಿದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾದರೆ ಮತ್ತಿತ್ತರ ಮೇರು ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..  ಚನ್ನಾಂಬಿಕ ನಿರ್ಮಾಣದಡಿಯಲ್ಲಿ ತಯಾರಿಸಲ್ಪಟ್ಟ ಈ ಚಿತ್ರವನ್ನು ನಿರ್ಮಾಪಕರು ಜಯಣ್ಣ ಮತ್ತು ಬೋಗೇಂದ್ರ ವಿತರಣೆ ಮಾಡಲಿದ್ದಾರೆ.

Image result for seetharama kalyana

ಮೈಸೂರಿನಲ್ಲಿ ಪ್ರೀ ರಿಲೀಸ್ ಇವೆಂಟ್

ಜನವರಿ 19 ರಂದು ಮೈಸೂರಿನಲ್ಲಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು  ಇಟ್ಟುಕೊಳ್ಳಲು ತಂಡವು ನಿರ್ಧರಿಸಿದೆ. ಅಲ್ಲಿ ಟ್ರೇಲರ್ ಬಿಡುಗಡೆ ಮಾಡಲಿದ್ದು ,ಕನಿಷ್ಠ 3 ಲಕ್ಷ ಜನರನ್ನು ಎದುರು ನಿರೀಕ್ಷಿಸುತ್ತಿದ್ದಾರೆ.

130 ಕಲಾವಿದರು ಈ ಚಿತ್ರದಲ್ಲಿ

‘ಸೀತಾರಾಮಾ ಕಲ್ಯಾಣ’ ಚಿತ್ರಕ್ಕೆ ಅನೂಪ್ ರೂಬೆನ್ಸ್ ಸಂಗೀತ ಮತ್ತು ಜೆ ಸ್ವಾಮಿ ಅವರ ಛಾಯಾಗ್ರಹಣವಿದ್ದು , ಇದು ಆಕ್ಷನ್-ಪ್ಯಾಕ್ಡ್ ಫ್ಯಾಮಿಲಿ ಕಥೆಯಾಗಿದ್ದು 130 ಕಲಾವಿದರು ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ… ಪ್ರಸಿದ್ಧ ನಟರಾದ ಮಧು, ಶರತ್ ಕುಮಾರ್, ರವಿ ಶಂಕರ್. ಭಾಗ್ಯಶ್ರೀ ಮತ್ತು ಸಂಜಯ್ ಕಪೂರ್ ಕೂಡಾ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

#seetharamakalyana #sandalwood #balkaninews

Tags