ಸುದ್ದಿಗಳು

ಒಂದು ಪೋಸ್ಟ್ ಗೆ ಈ ತಾರೆಗೆ ರೂ.24 ಕೋಟಿ

ಕ್ರೇಜ್ ಗಾಯಕಿ, ನಟಿ ಸೆಲೀನಾ ಗೋಮೇಜ್ ಗೆ ಕೋಟ್ಯಾಂತರ ಅಭಿಮಾನಿಗಳು

ಎರಡು ವರ್ಷಗಳ ಹಿಂದೆ ಸೆಲೀನಾ ಲ್ಯೂಪಸ್ ಖಾಯಿಲೆಗೆ ತುತ್ತಾಗಿದ್ದರು. ಇದರಿಂದ ಆಕೆಯ ಎರಡು ಕಿಡ್ನಿಗಳು ಹಾಳಾದವು. ಆಗ ಸೆಲೀನಾ ಗೆಳತಿ, ಹಾಲಿವುಡ್ ನಟಿ ಫ್ರಾನ್ಸಿಯಾ ರೈಜ್ ಒಂದು ಕಿಡ್ನಿ ದಾನವಾಗಿ ನೀಡಿದ್ದಾರೆ.

ಅಮೆರಿಕದ ಗಾಯಕಿ, ನಟಿ ಸೆಲೀನಾ ಗೋಮೇಜ್ಗೆ ಜಗತ್ತಿನಾದ್ಯಂತ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಆಕೆಗೆ ಅತ್ಯಧಿಕ 141.5 ಮಿಲಿಯ ನ್ ಫಾಲೋವರ್ಸ್ ಇದ್ದಾರೆ. ಸೆಲೀನಾ ಪೋಸ್ಟ್ ಮಾಡುವ ಫೋಟೋಗಳು, ವೀಡಿಯೋಗಳಿಗಾಗಿ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿರುತ್ತಾರೆ. ಅವರು ಒಂದೇ ಒಂದು ಪೋಸ್ಟ್ ಮಾಡಿದರೂ ಲಕ್ಷಗಳಲ್ಲಿ ಲೈಕ್ಸ್, ಕಾಮೆಂಟ್ಸ್ ಬರುತ್ತಿರುತ್ತವೆ. ಅಷ್ಟೆಲ್ಲಾ ಜನಪ್ರಿಯತೆ ಇರುವ ಸೆಲಿನಾಗೆ ಕೇಳಿದಷ್ಟು ಸಂಭಾವನೆ ನೀಡಲು ಮುಂದೆ ಬರುತ್ತಿವೆಯಂತೆ.

ಪ್ರಚಾರ ರಾಯಭಾರಿಯಾಗಿ

ಇತ್ತೀಚೆಗೆ ಖ್ಯಾತ ಜರ್ಮನ್ ಕಂಪೆನಿ ಆದ ಪ್ಯೂಮಾಗೆ ಪ್ರಚಾರ ರಾಯಭಾರಿಯಾಗಿ ಸೆಲೀನಾ ವ್ಯವಹರಿಸುತ್ತಿದ್ದಾರೆ. ಈ ಬ್ರ್ಯಾಂಡ್ ಗೆ ಸಂಬಂಧಿಸಿದಂತೆ ಸೆಲೀನಾ ಇನ್ ಸ್ಟಾಗ್ರಾಮ್ ನಲ್ಲಿ ಹಾಕುವ ಒಂದೊಂದು ಪೋಸ್ಟ್ ಗೆ ಎಷ್ಟು ಸಂಪಾದಿಸುತ್ತಾರೆ ಎಂದು ಗೊತ್ತಾದರೆ ಶಾಕ್ ಆಗುತ್ತದೆ. ಸೆಲೀನಾ ಹಾಕುವ ಒಂದೊಂದು ಪೋಸ್ಟ್ ಗೆ 3.5 ಮಿಲಿಯನ್ ಡಾಲರ್ ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಅಂದರೆ ನಮ್ಮ ಕರೆನ್ಸಿಯಲ್ಲಿ ಸುಮಾರು ರೂ.24 ಕೋಟಿ 75 ಲಕ್ಷ.

ಸಂಭಾವನೆಯ ವಿಚಾರ

ಪ್ಯೂಮಾ ಬ್ರ್ಯಾಂಡ್ ನ ಬಟ್ಟೆಗಳು, ಶೂಸ್ ಹಾಕಿಕೊಂಡು ಸೆಲೀನಾ ತೆಗೆಸಿಕೊಂಡಿರುವ ಫೋಟೋಗಳಿಗೆ ಲಕ್ಷಗಳಲ್ಲಿ ಲೈಕ್ಸ್ ಬರುತ್ತಿವೆ. ಆದರೆ ಪ್ಯೂಮಾದಿಂದ ಸೆಲೀನಾ ತೆಗೆದುಕೊಳ್ಳುವ ಸಂಭಾವನೆಯ ಸ್ವಲ್ಪ ಭಾಗವನ್ನು ಸಂಶೋಧನಾ ಸಂಸ್ಥೆಗೆ ದಾನ ಮಾಡುತ್ತಿದ್ದಾರೆ.

ಖಾಯಿಲೆಗೆ ತುತ್ತಾಗಿದ್ದ ಸೆಲೀನಾ

ಎರಡು ವರ್ಷಗಳ ಹಿಂದೆ ಸೆಲೀನಾ ಲ್ಯೂಪಸ್ ಖಾಯಿಲೆಗೆ ತುತ್ತಾಗಿದ್ದರು. ಇದರಿಂದ ಆಕೆಯ ಎರಡು ಕಿಡ್ನಿಗಳು ಹಾಳಾದವು. ಆಗ ಸೆಲೀನಾ ಗೆಳತಿ, ಹಾಲಿವುಡ್ ನಟಿ ಫ್ರಾನ್ಸಿಯಾ ರೈಜ್ ಒಂದು ಕಿಡ್ನಿ ದಾನವಾಗಿ ನೀಡಿದ್ದಾರೆ. ತನ್ನಂತೆ ಈ ರೋಗಕ್ಕೆ ಯಾರೂ ತುತ್ತಾಗಬಾರದು ಎಂಬ ಉದ್ದೇಶದಿಂದ ಉತ್ತಮ ಔಷಧಿಗಳನ್ನು ತಯಾರಿಸಲು ಸಂಶೋಧನೆ ಮಾಡುತ್ತಿರುವ ಸಂಸ್ಥೆಗಳಿಗೆ ಸೆಲೀನಾ ದಾನ ನೀಡುತ್ತಿದ್ದಾರೆ.

#California life @puma

A post shared by Selena Gomez (@selenagomez) on

Tags