ಸುದ್ದಿಗಳು

ಕಿರುತೆರೆಯಿಂದ ಬೆಳ್ಳಿತೆರೆಗೆ ಭರತ್ ಬೋಪಣ್ಣ

ಬೆಂಗಳೂರು, ಮಾ.25:

ಕಿರುತೆರೆಯಲ್ಲಿ ಅಭಿನಯಿಸಿದ ಕಲಾವಿದರು ಬೆಳ್ಳಿತೆರೆಯಲ್ಲೂ ಮಿಂಚುವುದು ಹೊಸತೇನಲ್ಲ. ಕಿರುತೆರೆಯಿಂದ ತಮ್ಮ ಬಣ್ಣದ ಲೋಕವನ್ನು ಆರಂಭಿಸಿ ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲು ತಯಾರಾಗಿರುವ ಈತ ಮಂಜಿನ ನಗರಿಯ ಮಡಿಕೇರಿಯ ಹುಡುಗ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯ ಲಕ್ಕಿಯಾಗಿ ಹೆಣ್ ಮಕ್ಕಳ ಮನ ಸೆಳೆದಿರುವ ಈ ಚಾಕಲೇಟ್ ಹುಡುಗನ ಹೆಸರು ಭರತ್ ಬೋಪಣ್ಣ.

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಲಕ್ಕಿ ಪಾತ್ರದ ಮೂಲಕ ಮನೆ ಮಾತಾಗಿರುವ ಭರತ್ ಮೊದಲ ಬಾರಿ ಬಣ್ಣ ಹಚ್ಚಿದ್ದು ‘ಗಿರಿಜಾ ಕಲ್ಯಾಣ’ ಧಾರಾವಾಹಿಗೆ. ಅಲ್ಲಿ ರಾಜಕುಮಾರನ ಪಾತ್ರಕ್ಕೆ ಜೀವ ತುಂಬಿದ ಭರತ್ ಮಾಡೆಲಿಂಗ್ ಗೂ ಸೈ.

ಮೊದಲಿನಿಂದಲೂ ನನಗೆ ನಟನೆಯತ್ತ ವಿಶೇಷ ಆಸಕ್ತಿ ಇದ್ದುದ್ದೇನೂ ನಿಜ. ಆದರೆ ತಾನೊಬ್ಬ ನಟ ಆಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಈ ಕ್ಷೇತ್ರಕ್ಕೆ ನಾನು ಹೊಸಬ. ಮೊದಲ ಧಾರಾವಾಹಿಯಲ್ಲೇ ಪೌರಾಣಿಕ ಧಾರಾವಾಹಿ ಸಿಕ್ಕಿದ್ದು ನನಗೆ ತುಂಬಾ ಖುಷಿ ನೀಡಿದೆ. ಮುಂದೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಬಯಕೆಯಿದೆ ಎನ್ನುವ ಭರತ್ ಬೋಪಣ್ಣ ಇದೀಗ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ.

ಸ್ಪರ್ಶ ರೇಖಾ ನಿರ್ಮಾಣದಲ್ಲಿ ಮೂಡಿ ಬರಲಿರುವ ‘ಡೆಮೋ ಪೀಸ್’ ಸಿನಿಮಾದಲ್ಲಿ ನಾಯಕನಾಗಿ ಭರತ್ ಕಾಣಿಸಿಕೊಳ್ಳಲಿದ್ದಾರೆ. ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಭರತ್ ನಟನೆ ಇಷ್ಟವಾದ ಕಾರಣ ಈ ಸಿನಿಮಾಗೆ ಅವರನ್ನು ಆಯ್ಕೆ ಮಾಡಲಾಗಿದೆಯಂತೆ. ‘ಪಂಚತಂತ್ರ’ ಖ್ಯಾತಿಯ ಸೋನಾಲ್ ಈ ಚಿತ್ರದ ನಾಯಕಿ ಪಾತ್ರಕ್ಕೆ ಜೀವ ತುಂಬಲಿರುವ ಈ  ಸಿನಿಮಾದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ.

‘ಡೆಮೋ ಪೀಸ್’ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು ಡಾನ್ಸ್, ಫೈಟ್, ಹಾಡು ಜೊತೆಗೆ ರೋಮಾನ್ಸ್ ಕೂಡಾ ಇದೆ. ಅಂದ ಹಾಗೆ ವಿವೇಕ್ ಅವರು ಈ ನಿರ್ದೇಶನ ಮಾಡಲಿದ್ದಾರೆ.

ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..!

#balkaninews #sandalwood #kannadamovies #brahmagantukannadaserial #bharatbopanna

Tags