ಸುದ್ದಿಗಳು

ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಿರುತೆರೆ ಕಲಾವಿದರು

ಬೆಂಗಳೂರು, ಏ.16:

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದೆ. 18 ಮತ್ತು 23 ರಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿ ಮತದಾನ ನಡೆಯಲಿರುವ ವಿಚಾರ ನಮಗೆಲ್ಲಾ ತಿಳಿದೇ ಇದೆ‌. ರಾಜ್ಯ ಚುನಾವಣಾ ಆಯೋಗ ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿಸಲು ನಿರ್ಧರಿಸಿದೆ.

ಅದೇ ಕಾರಣದಿಂದ ಮತದಾನದ ಕುರಿತಾಗಿ ಹಲವು ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಚಿತ್ರನಟಿ ಪ್ರಣೀತಾ ಹಾಗೂ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಮತದಾನದ ಕುರಿತಾದ ಪ್ರಚಾರದ ರಾಯಭಾರಿಗಳನ್ನಾಗಿ ನೇಮಿಸಿಕೊಂಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತದಾನದ ಬಗ್ಗೆ ಜನರಲ್ಲಿ ತಿಳುವಳಿಕೆ ಹೇಳಿರುವ ವಿಚಾರ ನಮಗೆಲ್ಲಾ ತಿಳಿದೇ ಇದೆ.  ಇದೀಗ ಕಿರುತೆರೆ ಕಲಾವಿದರ ಸರದಿ. ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ಕವಿತಾ , ಶಾಲಿನಿ, ನೇಹಾ ಗೌಡ ಹಾಗೂ ಇನ್ನಿತರ ನಟ-ನಟಿಯರು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಸಂತಸದ ಸಂಗತಿಯೆಂದರೆ ಧಾರವಾಹಿಯ ಎಲ್ಲರೂ ‘ಮತದಾನ ನಮ್ಮೆಲ್ಲರ ಹಕ್ಕು, ಅಂದು ಮತ ಚಲಾಯಿಸುವುದಷ್ಟೇ ನಮ್ಮ ಕರ್ತವ್ಯ, ಎಲ್ಲಿಗೂ ಹೋಗದೆ ಮತ ಹಾಕೋಣ’ ಎಂದು ಘೋಷಣೆ ಕೂಗುವ ಮೂಲಕ ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸಿದ್ದಾರೆ.

 

View this post on Instagram

 

April 18&23 Loksabha elections pls cast ur vote it’s the most imp right of us as citizens. Pls do vote #festivalofdemocracy

A post shared by Srujan Lokesh (@srujanlokesh) on

ರಾಕುಲ್ ಪ್ರೀತ್ ಫೋಟೋ ವೈರಲ್!! ಈ ಫೋಟೋದಲ್ಲಿ ಅಂತದ್ದೇನಿದೆ!!?!!

#balkaninews #votingpower #filmchamber #serialactress #2019lokhasabhaelection

Tags