ಸುದ್ದಿಗಳು

ದೀಪಾವಳಿ ಹಬ್ಬದ ವಿಶೇಷವಾಗಿ ‘ಶ್ಯಾಡೋ’ ಸಿನಿಮಾದ ಹೊಸ ಪೋಸ್ಟರ್

ಮರಿ ಟೈಗರ್ ಅಭಿನಯದ 'ಶ್ಯಾಡೊ'

ಬೆಂಗಳೂರು, ನ.07: ಸದ್ಯ ‘ಶ್ಯಾಡೋ’ ಮೂಲಕ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ ನಟ ವಿನೋದ್ ಪ್ರಭಾಕರ್. ಸದ್ಯ ದೀಪಾವಳಿಯ ಹಬ್ಬದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದೆ.

ಹಬ್ಬದ ಪ್ರಯುಕ್ತ ಶ್ಯಾಡೋ ಪೋಸ್ಟರ್

ದೀಪಾವಳಿ ಹಬ್ಬದ ಪ್ರಯುಕ್ತ ಸದ್ಯ ಹಲವಾರು ಮುಂಬರುವ ಸಿನಿಮಾಗಳ ಫೋಸ್ಟರ್‌ಗಳು ಬಿಡುಗಡೆಯಾಗುತ್ತಿವೆ. ಇದೀಗ ನಟ ವಿನೊಧ್ ಪ್ರಭಾಕರ್ ಅವರ ‘ಶ್ಯಾಡೋ’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ವಿನೋಧ್ ಪ್ರಭಾಕರ್ ಅವರ ಲುಕ್ ಅನ್ನೇ ಬದಲಾಯಿಸಲಾಗಿದೆ.

ಮಾಸ್ ಅಂಡ್ ಕ್ಲಾಸ್ ಲುಕ್‌ ನಲ್ಲಿ ವಿನೋದ್

ಹೌದು, ರವಿಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವೇ ‘ಶ್ಯಾಡೋ’. ಡಬ್ಬಿಂಗ್ ಕಂಪ್ಲೀಟ್ ಮಾಡಿರುವ ಈ ಸಿನಿಮಾ ಇನ್ನೇನು ಬಿಡುಗಡೆಗೆ ರೆಡಿಯಾಗುತ್ತಿದೆ. ತಮ್ಮ ಕಟ್ಟು ಮಸ್ತಾದ ದೇಹದ ಮೂಲಕ ಎಲ್ಲರನ್ನು ಸೆಳೆದಿದ್ದ ಈ ನಟ. ಇದೀಗ ‘ಶ್ಯಾಡೋ’ ಸಿನಿಮಾದ ಮೂಲಕ ಮತ್ತಷ್ಟು ಅಭಿಮಾನಿಗಳಿಗೆ ರಸದೌತಣ ನೀಡಲು ಮುಂದಾಗಿದ್ದಾರೆ. ಎಲ್ಲಾ ಅಂದುಕೊಂಡತೆ ಆದರೆ ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Tags