ಸುದ್ದಿಗಳು

ಖಾಕಿ ತೊಟ್ಟು ಘರ್ಜಿಸಲಿದ್ದಾರೆ ಶಾರೂಖ್ ಖಾನ್..!

ಮುಂಬೈ, ಫೆ.12:

ಬಾಲಿವುಡ್ ನಟ ಶಾರೂಖ್ ಖಾನ್ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ‘ಝೀರೋ’ ಚಿತ್ರದ ನಂತರ ಶಾರೂಖ್ ಖಾನ್ ಯಾವ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ ಅನ್ನುವುದು ಭಾರೀ ಕುತೂಹಲ ಮೂಡಿಸಿತ್ತು. ಆ ವಿಚಾರ ಈಗ ಬಯಲಾಗಿದೆ. ಖ್ಯಾತ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ರ ಹೊಸ ಸಿನಿಮಾ ‘ ಇನ್ಸ್ ಪೆಕ್ಟರ್ ಗಾಲಿಬ್’ ಎಂಬ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ.

ಈ ಹೊಸ ಸಿನಿಮಾದ ಕುರಿತು ಈ ಚಲನಚಿತ್ರದ ನಿರ್ಮಾಪಕ ಮತ್ತು ಶಾರೂಖ್ ಖಾನ್ ಈಗಾಗಲೇ ಮಾತುಕತೆ ಕೂಡಾ ನಡೆಸಿದ್ದಾರೆ. ಈ ಚಿತ್ರವು ಮರಳು ಗಣಿಗಾರಿಕೆ ಮಾಫಿಯಾ ಮತ್ತು ಪೊಲೀಸ್ ನಡುವಿನ ಕಥಾಹಂದರವನ್ನು ಹೊಂದಿದೆ. ಈ ಥ್ರಿಲ್ಲರ್ ಚಿತ್ರದ ಮೂಲಕ ಮಧುರ್ ಮತ್ತು ಎಸ್.ಆರ್.ಕೆ ಇಬ್ಬರು ಮತ್ತೊಂದು ಯಶಸ್ಸನ್ನು ಹುಡುಕುತ್ತಿದ್ದಾರೆ. ಮಧುರ್ ಭಂಡಾರ್ಕರ್ ರ ಚಾಂದನಿ ಬಾರ್ (2001), ಉತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿತ್ತು. ಪೇಜ್ 3 (2005), ಟ್ರಾಫಿಕ್ ಸಿಗ್ನಲ್ (2007) ಚಿತ್ರದ ಮೂಲಕ ಭಂಡಾರ್ಕರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.

ಅದಲ್ಲದೇ ಮತ್ತೊಂದು ಚಿತ್ರ ಫ್ಯಾಷನ್ (2008) ಗಾಗಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಗಳ ನಾಮನಿರ್ದೇಶನಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು.

ಆನಂದ್ ಎಲ್.‌ರಾಯ್ ರ ‘ಝೀರೋ’, ಚಿತ್ರದಲ್ಲಿ ಶಾರುಖ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದು ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ದಾಖಲೆಗಳನ್ನು ಸೃಷ್ಟಿಸಲಿಲ್ಲ. ಶಾರೂಖ್ ಖಾನ್ ಈ ಚಿತ್ರದಲ್ಲಿ ವಿಭಿನ್ನ ಚೇತನದ ಯುವಕನ ಪಾತ್ರದಲ್ಲಿ ನಟಿಸಿದ್ದು, ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಸಾಥ್ ನೀಡಿದ್ದರು.

ವಿಕಲಚೇತನರ ಪಾತ್ರನಿರ್ವಹಿಸುವುದು ಸುಲಭದ ಮಾತಲ್ಲ: ಶಾರೂಖ್ ಖಾನ್

#bollywood #zerohindimovie #shahrukhkhan #shahrukhkhanmovies #balkaninews

Tags