ಸುದ್ದಿಗಳು

ಚಿತ್ರ ಗೆದ್ದ ಮಾತ್ರಕ್ಕೆ ನಟ ಪ್ರತಿಭಾವಂತ ಎಂದು ಹೇಗೆ ಹೇಳ್ತೀರಿ?

ಚಿತ್ರರಂಗ ಎಂಬುದು ಕ್ರಿಯಾತ್ಮಕ ಜನರ ಒಂದು ದೊಡ್ಡ ಸಮೂಹ..

ವ್ಯಕ್ತಿಯ ಸಾಧನೆಯಿಂದ ಆತನ ಪ್ರತಿಭೆಯನ್ನು ಅಳೆಯಲಾಗುವುದಿಲ್ಲ– ಶಾಹೀದ್

 ಮುಂಬೈ,ಆ.27: ನಟ ಶಾಹೀದ್ ಕಾಪೂರ್ ಶ್ರೀ ನಾರಾಯಣ್ ಸಿಂಗ್ ಅವರ ‘ಬಟ್ಟಿ ಗುಲ್ ಮೀಟರ್ ಚಾಲು’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಕುರಿತಂತೆ ನಿರೀಕ್ಷೆ ಹೆಚ್ಚಿದೆ. ಚಿತ್ರದ ಕುರಿತಂತೆ ಮಾತನಾಡಿರುವ ಶಾಹೀದ್ ಕಪೂರ್, ಒಬ್ಬ ನಿರ್ದೇಶಕನ ಹಿಟ್ ಹಾಗೂ ಫ್ಲಾಪ್ ಚಿತ್ರಗಳಿಂದ ಆತನ ಪ್ರತಿಭೆಯನ್ನು ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಸೋಲು ಗೆಲುವು ಜೀವನದ ಒಂದು ಭಾಗವೇ ಹೊರತು ಇದುವೇ ಯಶಸ್ಸಿನ ಮಾನದಂಡ ಅಲ್ಲ ಎನ್ನುವುದು ಅವರ ವಾದ.

ಚಿತ್ರ ಗೆದ್ದ ಮಾತ್ರಕ್ಕೆ ಆತ ಪ್ರತಿಭಾವಂತನಲ್ಲ!!

ಅಂದಹಾಗೆ ನಿರ್ದೇಶಕ ನಾರಾಯಣ್ ಸಿಂಗ್, ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್ -ಏಕ್ ಪ್ರೇಮ್ ಕಥಾ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಂದು ಚಿತ್ರದ ಸೋಲು -ಗೆಲುವು ನಿರ್ದೇಶಕನ ಪ್ರತಿಭೆಯ ಮಾನದಂಡ ಅಲ್ಲ. ಚಿತ್ರ ಗೆಲುವು ಸಾಧಿಸಿದರೆ ಆತ  ಪ್ರತಿಭವಾಂತ ಎಂದು ಹೇಗೆ ಹೇಳಲು ಸಾಧ್ಯ. ‘ಒಬ್ಬ ಚಿತ್ರನಿರ್ಮಾಪಕನ ಚಿತ್ರ ಮೇಲ್ಮೇಲೆ ಗೆಲುವು ಸಾಧಿಸಿತು ಎಂದಿಟ್ಟುಕೊಳ್ಳಿ. ಚಿತ್ರದಲ್ಲಿ ಆತನ ಪಾತ್ರ ತೀರಾ ಕಡಿಮೆ. ಬಂಡವಾಳ ಹೂಡುವುದು ಅತನ ಕೆಲಸ. ಹಾಗಾಂತ ಚಿತ್ರ ಗೆದ್ದ ಮಾತ್ರಕ್ಕೆ ಆತ ಪ್ರತಿಭಾವಂತ , ಹೊಸ ನಿರ್ಮಾಪಕರು ಕಡಿಮೆ ಪ್ರತಿಭೆಯನ್ನು ಹೊಂದಿದ್ದಾರೆ ಎಂಬ ಅರ್ಥವೇ? ಎಂದು ಶಾಹೀದ್ ಪ್ರಶ್ನಿಸಿದ್ದಾರೆ.

ಚಿತ್ರದ ಸೋಲು ಗೆಲುವಿಗೆ ಇದು ಕಾರಣವಾಗುವುದಿಲ್ಲ

ನಾನು ಚಿತ್ರ ನಿರ್ದೇಶಕರೊಂದಿಗೆ ಮಾತನಾಡುವಾಗ, ಆತನ ಈ ಹಿಂದಿನ ಯಶಸ್ಸಿನ ಬಗ್ಗೆ ನೋಡಲು ಹೋಗುವುದಿಲ್ಲ. ಚಿತ್ರರಂಗ ಎಂಬುದು ಕ್ರಿಯಾತ್ಮಕ  ಜನರ ಒಂದು ದೊಡ್ಡ ಸಮೂಹ. ಎಲ್ಲರೂ ಅವರ ಕೈಲಾಗುವಷ್ಟು ಉತ್ತಮ ಪ್ರದರ್ಶನ ನೀಡುತ್ತಾರೆ. ಒಬ್ಬ ನಟನಾಗಿ ನಾನು ಸ್ಕ್ರಿಪ್ಟ್ ಓಕೆ ಮಾಡಿದ ಬಳಿಕ, ಪಾತ್ರಕ್ಕೆ ಜೀವ ತುಂಬಲು ,ನ್ಯಾಯ ಒದಗಿಸಲು ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಮಾಡುತ್ತೇನೆ. ಆದರೆ ಚಿತ್ರದ ಸೋಲು ಗೆಲುವಿಗೆ ಇದು ಕಾರಣವಾಗುವುದಿಲ್ಲ ಎನ್ನುತ್ತಾರೆ ಶಾಹೀದ್.

ಅತ್ಯುತ್ತಮ ಸ್ಕ್ರಿಪ್ಟ್ ಚಿತ್ರದ ಯಶಸ್ಸಿಗೆ ಕಾರಣವಾಗುವುದಿಲ್ಲ. ಆ ಕತೆಯನ್ನು ಪ್ರೇಕ್ಷಕನ ಮನಮುಟ್ಟುವಂತೆ ತಲುಪಿಸಿದಾಗ ಮಾತ್ರ ಸ್ಕ್ರಿಪ್ಟ್ ಗೆಲ್ಲುತ್ತದೆ. ಹೀಗಾಗಿ ಒಂದು ಚಿತ್ರದ ಯಶಸ್ಸು ಹಾಗೂ ಸೋಲು ನಿರ್ದೇಶಕನ , ನಟನ ಪ್ರತಿಭೆಗೆ ಹಿಡಿದ ಮಾನದಂಡವಲ್ಲ ಎಂದಿದ್ದಾರೆ ಶಾಹೀದ್ ಕಪೂರ್.

 

Tags