ಸುದ್ದಿಗಳು

ಶಾಹೀದ್ ಗೆ ಬಿಸಿ ಮುಟ್ಟಿಸಿದ ಹ್ಯಾಕರ್ಸ್ ಗಳು..

ಶಾಹಿದ್ ಐಲವ್ ಯೂ ಎಂದು ಹೇಳಿದ್ದು ಯಾರಿಗೆ?

ಟ್ವಿಟ್ಟರ್ನಲ್ಲಿ ಮೂರು ಟ್ವಿಟ್ಗಳನ್ನು ಮಾಡಿರುವ ಹ್ಯಾಕರ್ಸ್​, ಪದ್ಮಾವತ್ ಚಿತ್ರದಲ್ಲಿ ಸೂಕ್ತ ಪಾತ್ರ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ

ನವದೆಹಲಿ,ಸೆ.07 : ಬಾಲಿವುಡ್​ ನಟ ಶಾಹೀದ್ ಕಪೂರ್​ ಈಗ ಸುದ್ದಿಯಲ್ಲಿದ್ದಾರೆ. ಮಿರಾ ರಜಪೂತ್ ಗೆ ಗಂಡು ಮಗು ಹುಟ್ಟಿದ ಸಂತಸದ ಸಿಹಿ ಸುದ್ದಿಯಾದರೆ ಇನ್ನೊಂದೆಡೆ ಶಾಹಿದ್ ನಟಿ ಕತ್ರಿನಾ ಕೈಫ್​ಗೆ ಪ್ರಪೋಸ್​ ಮಾಡಿದ್ದಾರೆ. ತಮ್ಮ ಟ್ವಿಟ್ಟರ್​ನಲ್ಲಿ ‘ಐ ಲವ್​ ಯು ಕತ್ರಿನಾ ಕೈಫ್’​ ಎಂದು ಟ್ವಿಟ್  ಮಾಡಿದ್ದಾರೆ. ಶಾಹಿದ್ ಗೆ ಏನಪ್ಪಾ ಇಂತಹ ಪರಿಸ್ಥಿತಿ ಬಂತು ಅಂದುಕೊಂಡಿರಾ?.

Image result for katrina kaif

ಹ್ಯಾಕರ್ಸ್ ಗಳ ಹಾವಳಿ

ಈ ಟ್ವೀಟ್​ ಮಾಡಿದ್ದು ಶಾಹೀದ್ ಅಲ್ಲ, ಬದಲಾಗಿ ಹ್ಯಾಕರ್ಸ್​​. ಹೌದುಈಗ ಸಾಮಾಜಿಕ ಜಾಲಾತಾಣದಲ್ಲಿ ಹ್ಯಾಕರಸ್ ಗಳ ಹಾವಳಿ ಹೆಚ್ಚಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೂ ಹ್ಯಾಕರ್ಸ್ ಬಿಟ್ಟಿಲ್ಲ.

ಹೌದು, ನಿನ್ನೆಯಷ್ಟೇ ಎರಡನೇ ಮಗು ( ಗಂಡು ಮಗು) ಪಡೆದ ಖುಷಿಯಲ್ಲಿರುವ ಶಾಹೀದ್​​ಗೆ​ ಸಾಮಾಜಿಕ ಜಾಲಾತಾಣದಲ್ಲಿ ಖದೀಮರು ಶಾಕ್ ನೀಡಿದ್ದಾರೆ. ಅವರ ಟ್ವಿಟ್ಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಟ್ವಿಟ್ಟರ್​ನಲ್ಲಿ ಮೂರು ಟ್ವಿಟ್​ಗಳನ್ನು ಮಾಡಿರುವ ಹ್ಯಾಕರ್ಸ್​, ಪದ್ಮಾವತ್ ಚಿತ್ರದಲ್ಲಿ ಸೂಕ್ತ ಪಾತ್ರ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನೊಂದು ಟ್ವೀಟ್​​ನಲ್ಲಿ ಮಾಶಾಲ್ಲಾ ಹಾಡಿನೊಂದಿಗೆ ಕತ್ರಿನಾ ಅವರಿಗೆ ಐ ಲವ್​ ಯು ಹೇಳಿದ್ದಾರೆ, ಕೊನೆಯ ಟ್ವೀಟ್​​ ಟರ್ಕಿ ಭಾಷೆಯಲ್ಲಿದೆ.

ಇನ್ನು ಕೂಡಲೇ ಎಚ್ಚೆತ್ತುಕೊಂಡಿರುವ ಶಾಹೀದ್​ ಇನ್​ಸ್ಟಾಗ್ರಾಂನಲ್ಲಿ ಹ್ಯಾಕರ್​​ಗಳಿಂದ ಮುಕ್ತವಾಗಿಸಿಕೊಂಡಿದ್ದಾರೆ. ಟ್ವಿಟ್ಟರ್​​ ಖಾತೆಯನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆದಿದೆ.

 

Tags