ಸುದ್ದಿಗಳು

ಬಾಲಿವುಡ್ ನ ಶಾಹೀದ್-ಮೀರಾ ದಂಪತಿಯ ಮಗನ ಹೆಸರೇನು ಗೊತ್ತಾ?

ಝೈನಾ ಕಪೂರ್ ನಮ್ಮ ಜೀವನದ ಅರ್ಥವನ್ನು ಪೂರ್ಣಗೊಳಿಸಿದ್ದಾನೆ

ಸೆಪ್ಟೆಂಬರ್ 5ರಂದು ಮೀರಾ , ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಝೈನಾ ಕಪೂರ್ ಗೆ ಜನ್ಮ ನೀಡಿದರು.

ಮುಂಬೈ,ಸೆ.08: ಬಾಲಿವುಡ್ ನಟ ಶಾಹೀದ್ ಕಾಪೂರ್ ಹಾಗೂ ಮೀರಾ ರಜಪೂತ್ ಕೆಲದಿನಗಳ ಹಿಂದಷ್ಟೇ ನೂತನ ಅಥಿತಿಯನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದರು. ಗಂಡು ಮಗುವಿಗೆ ಮಿರಾ ರಜಪೂತ್ ಹೆಸರಿಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಮಗುವಿನ ಹೆಸರಿನ ಬಗ್ಗೆಯೇ ಚರ್ಚೆ ಆರಂಭವಾಗಿತ್ತು.

ಝೈನಾ ಕಪೂರ್

ಇದೀಗ ದಂಪತಿ ಈ ಎಲ್ಲಾ ಚರ್ಚೆಗೆ ತೆರೆ ಎಳೆದಿದ್ದು, ತಮ್ಮ ಮುದ್ದಿನ ಪುತ್ರನಿಗೆ’ ಝೈನಾ ಕಪೂರ್’ ಎಂದು ಹೆಸರಿಸಿದ್ದಾರೆ. ಈ ಬಗ್ಗೆ ಟ್ಟೀಟ್ ಮಾಡಿರುವ ಶಾಹೀದ್ ಕಪೂರ್. ಝೈನಾ ಕಪೂರ್ ನಮ್ಮ ಜೀವನದ ಅರ್ಥವನ್ನು ಪೂರ್ಣಗೊಳಿಸಿದ್ದಾನೆ ಎಂದು ಬಣ್ಣಿಸಿದ್ದಾರೆ. ನಿಮ್ಮೆಲ್ಲಾ ಅಭಿನಂದನೆಗಳಿಗೆ ಧನ್ಯವಾದಗಳು. ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

\Image result for shahid kapoor new born baby

ಸೆಪ್ಟೆಂಬರ್ 5ರಂದು ಮೀರಾ , ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಝೈನಾ ಕಪೂರ್ ಗೆ ಜನ್ಮ ನೀಡಿದರು. ಅಂದಹಾಗೆ ಕಳೆದ ದಿನ ಶಾಹೀದ್ ಕಪೂರ್ ಟ್ವೀಟ್ಟರ್ ಅಕೌಂಟ್ ಹ್ಯಾಕ್ ಆಗಿ, ಪದ್ಮಾವತ್ ಚಿತ್ರದ ಕುರಿತಂತೆ ಕೆಟ್ಟದಾಗಿ ಬಿಂಬಿಸಿ ಟ್ವೀಟ್ ಮಾಡಲಾಗಿತ್ತು. ಈ ಕುರಿತಂತೆ ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಶಾಹೀದ್ ಕಪೂರ್, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಸದ್ಯಕ್ಕೆ ‘ಬಟ್ಟಿ ಗುಲ್ ಮೀಟರ್’ ಚಿತ್ರದಲ್ಲಿ ಶಾಹೀದ್ ಬ್ಯುಸಿಯಾಗಿದ್ದು, ಚಿತ್ರ ಸೆಪ್ಟೆಂಬರ್ 21ರಂದು ಬಿಡುಗಡೆಯಾಗಲಿದೆ.

 

Tags